ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಭಾರತ ವರುಣನ ಆರ್ಭಟಕ್ಕೆ ತತ್ತರಿಸಿದ್ದು, ಹಿಮಾಚಲ ಪ್ರದೇಶ, ನವದೆಹಲಿ ಸೇರಿದಂತೆ ಹಲವು ಭಾಗಗಳಲ್ಲಿ ಮಹಾಮಳೆ ಜನಜೀವನ ಅಸ್ತವ್ಯಸ್ತಮಾಡಿದೆ.
ಹಿಮಾಚಲ ಪ್ರದೇಶದಲ್ಲಿ ಸುರಿದ ಮಳೆಗೆ ಒಟ್ಟಾರೆ 88 ಮಂದಿ ಮೃತಪಟ್ಟಿದ್ದಾರೆ. ಕುಲು ಜಿಲ್ಲೆಯ ಬಿಯಾಸ್ ನದಿಯು ಭೀಕರತೆ ಸೃಷ್ಟಿಸಿದ್ದು, ನಿನ್ನೆಯಷ್ಟೇ 13 ಮೃತದೇಹಗಳನ್ನು ನೀರಿನಿಂದ ಹೊರತೆಗೆಯಲಾಗಿದೆ.
ಮೃತರು ಯಾರು? ಎಷ್ಟು ದಿನಗಳವರೆಗೂ ಮೃತದೇಹ ನೀರಿನಲ್ಲಿತ್ತು ಎನ್ನುವ ಮಾಹಿತಿ ದೊರಕಿಲ್ಲ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದು, ನಂತರ ಗುರುತು ಸಿಗಬಹುದು ಎನ್ನಲಾಗಿದೆ.
ಹಿಮಾಚಲ ಪ್ರದೇಶದಲ್ಲಿ ರಕ್ಷಣಾ ಕಾರ್ಯ ಜಾರಿಯಲ್ಲಿದ್ದು, 1500ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದೆ. 40ಕ್ಕೂ ಹೆಚ್ಚು ವಿದೇಶಿಯರನ್ನೂ ರಕ್ಷಿಸಲಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೂ ಭಾರೀ ಮಳೆಯಾಗುತ್ತಿದ್ದು, ಯಮುನಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ.