ಜಮ್ಮುವಿನಲ್ಲಿ ಭಾರೀ ಬಿಸಿಲು: ಹೊರೆ ಹೊತ್ತೊಯ್ಯುವ ಪ್ರಾಣಿಗಳಿಗೆ ಮಧ್ಯಾಹ್ನ ರೆಸ್ಟ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಜಮ್ಮು ಕಾಶ್ಮೀರದಲ್ಲಿ ಬಿಸಿಲಿನ ಝಳ ಹೆಚ್ಚಾಗಿದ್ದು, ಮಧ್ಯಾಹ್ನದ ವೇಳೆ ಹೊರೆ ಹೊತ್ತೊಯ್ಯುವ ಪ್ರಾಣಿಗಳಿಗೆ ರೆಸ್ಟ್‌ ನೀಡಬೇಕು ಎಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಹೆಚ್ಚಿನ ಬಿಸಿಲಿನಲ್ಲಿ ದಿನವಿಡೀ ಪ್ರಾಣಿಗಳಿಂದ ಕೆಲಸ ಮಾಡಿಸಿಕೊಳ್ಳುತ್ತಿರುವ ಕಾರಣ ಪ್ರಾಣಿಗಳ ಸಾವಿನ ಸಂಖ್ಯೆ ಹೆಚ್ಚಾಗಿದೆ, ಇದನ್ನು ಗಮನದಲ್ಲಿಟ್ಟುಕೊಂಡು ಮಧ್ಯಾಹ್ನದ ಸಮಯದಲ್ಲಿ ಪ್ರಾಣಿಗಳ ಮೇಲೆ ಸರಕು ಹೊರಿಸಿ ಓಡಾಟಕ್ಕೆ ಬ್ರೇಕ್‌ ಹಾಕಲಾಗಿದೆ.

ಎಮ್ಮೆ, ಹೋರಿ, ಕುದುರೆ, ಹೇಸರಗತ್ತೆ, ಕತ್ತೆ, ಒಂಟೆಯಂತಹ ಹಲವು ಪ್ರಾಣಿಗಳನ್ನು ಬಳಸಿಕೊಂಡು ಮಧ್ಯಾಹ್ನದ ವೇಳೆಯಲ್ಲಿ ವಸ್ತುಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕೊಂಡ್ಯೊಯ್ಯುವುವ ನಿದರ್ಶನಗಳಿವೆ ಎಂದು ವರದಿಯಾಗಿದೆ.

ಹೆಚ್ಚಿನ ಹಗಲಿನ ತಾಪಮಾನ(37ಡಿಗ್ರಿ ಸೆಲ್ಸಿಯಸ್) ಪ್ರಾಣಿಗಳ ಸಾವಿಗೆ ಕಾರಣವಾಗುತ್ತಿದೆ ಎಂದು ಜಮ್ಮುವಿನ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಚಿನ್ ಕುಮಾರ್ ವೈಶ್ಯ ಹೇಳಿದ್ದು, ಸದ್ಯ ಇದಕ್ಕೆ ಬ್ರೇಕ್‌ ಬಿದ್ದಿದೆ.

ಪ್ರಾಣಿಗಳ ಮೇಲಿನ 1960 ರಕೌರ್ಯ ತಡೆ ಕಾಯಿದೆ, 1965 ಪ್ರಾಣಿಕಲ್ಯಾಣ ಶಾಸನಗಳ ನಿಬಂಧನೆಗಳನ್ನು ಉಲ್ಲಂಘಿಸುವ ಅಪರಾಧಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸೂಚನೆ ನೀಡಿದರು.
ಸೂಚನೆ ಪ್ರಕಾರ ಆದೇಶವು ತಕ್ಷಣದಿಂದಲೆ ಜಾರಿಗೆ ತರಲಾಗುವುದು. ಕರಡು ಮತ್ತು ಪ್ಯಾಕ್ ಅನಿಮಲ್ಸ್ ನಿಯಮಗಳು, 1965 ರ ಕ್ರೌರ್ಯ ತಡೆಗಟ್ಟುವಿಕೆ ಸೆಕ್ಷನ್6 ರ ಅಡಿಯಲ್ಲಿ ಯಾವುದೇ ವ್ಯಕ್ತಿ, ಯಾವುದೇ ವಾಹನವನ್ನು ಎಳೆಯಲು, ಹೊರೆ ಹೊತ್ತೊಯ್ಯಲು ಯಾವುದೇ ಪ್ರಾಣಿಯನ್ನು ಬಳಸಿದರು ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!