ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಡುಗೆ ವಿಚಾರದಲ್ಲಿ ಬಾಣಸಿಗರ ಕೈಗಳು ಮೋಡಿ ಮಾಡುತ್ತವೆ ಎಂಬುದು ಸುಳ್ಳೇನಲ್ಲ. ಅಂತಹ ಅದ್ಭುತವಾದ ಕೈಗಳಿಂದ ಬರೀ ರುಚಿಯೇ ಅಲ್ಲ ಕಲಾಕೃತಿಗಳೂ ಮೂಡಿಬರುತ್ತವೆ ಎಂಬುದನ್ನು ಬಾಣಸಿಗರೊಬ್ಬರು ರುಜು ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಗ್ರಾಹಕರನ್ನು ಸೆಳೆಯಲು ವಿವಿಧ ತರಕಾರಿಗಳಿಂದ ಮಾಡಿದ ಕಲಾಕೃತಿಗಳನ್ನು ಭಕ್ಷ್ಯಗಳ ಮಧ್ಯದಲ್ಲಿ ಅಲಂಕರಿಸಲಾಗುತ್ತದೆ. ಹೀಗಿರುವಾಗ ಬಾಣಸಿಗ ಅಂಕಿತ್ ಬಾಗ್ಯಾಲ್ ರಾಮಾಯಣದಿಂದ ಸ್ಫೂರ್ತಿ ಪಡೆದು ಕಲ್ಲಂಗಡಿ ಹಣ್ಣಿನ ಮೇಲೆ ಶ್ರೀರಾಮನ ಕಲಾಕೃತಿಯನ್ನು ರಚಿಸಿದ್ದಾರೆ. ಈ ವಿಡಿಯೋ ಈಗ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.
ಅಂಕಿತ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ಕಲ್ಲಂಗಡಿ ಮೇಲಿನ ರಾಮನ ಕಲಾಕೃತಿ ವೀಡಿಯೊ ವೈರಲ್ ಆಗಿದೆ.
ನೆಟ್ಟಿಗರು ಲವ್ ಎಮೋಜಿಗಳ ಜೊತೆಗೆ ‘ಜೈ ಶ್ರೀರಾಮ್’ ಎಂದು ಪ್ರತಿಕ್ರಿಯಿಸಿದ್ದಾರೆ. ಅಂಕಿತ್ ಬಾಗ್ಯಾಲ್ ಅವರ ಅದ್ಭುತ ಕಲಾಕೃತಿಗೆ ನೆಟ್ಟಿಗರು ಪ್ರಶಂಸೆಗಳನ್ನು ಸುರಿಸುತ್ತಿದ್ದಾರೆ.