SHOCKING| ಇದ್ದಕ್ಕಿದ್ದಂತೆ ಅದೃಶ್ಯವಾದ ಹೆಲಿಕಾಪ್ಟರ್‌: ಆರು ಮಂದಿ ಕಣ್ಮರೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆರು ಮಂದಿ ಪ್ರಯಾಣಿಕರನ್ನು ಹೊತ್ತ ಹೆಲಿಕಾಪ್ಟರ್ ಇದ್ದಕ್ಕಿದ್ದಂತೆ ಅದೃಶ್ಯವಾದ ಘಟನೆ ಮಂಗಳವಾರ ನೇಪಾಳದಲ್ಲಿ ನಡೆದಿದೆ.  ಸೋಲುಖುಂಬುವಿನಿಂದ ನೇಪಾಳದ ಕಠ್ಮಂಡುವಿಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದ್ದು, 9 NMV ಚಿಹ್ನೆಯೊಂದಿಗೆ ಮನಂಗ್ ಏರ್ ಹೆಲಿಕಾಪ್ಟರ್ ಸೋಲುಖುಂಬುವಿನಿಂದ ಟೇಕ್ ಆಫ್ ಆದ 15 ನಿಮಿಷಗಳಲ್ಲಿ ಕಣ್ಮರೆಯಾಯಿತು.

ಮಂಗಳವಾರ ಬೆಳಗ್ಗೆ 10.15ಕ್ಕೆ ಹೆಲಿಕಾಪ್ಟರ್ ಕಂಟ್ರೋಲ್ ಟವರ್ ಸಂಪರ್ಕ ಕಳೆದುಕೊಂಡಿತ್ತು. ಈ ಹೆಲಿಕಾಪ್ಟರ್‌ನಲ್ಲಿ ಐವರು ವಿದೇಶಿ ಪ್ರಯಾಣಿಕರಿದ್ದಾರೆ. ಹೆಲಿಕಾಪ್ಟರ್ ಕ್ಯಾಪ್ಟನ್ ಚೆಟ್ ಗುರುಂಗ್ ಅವರು ಪೈಲಟ್ ಮಾಡಿದ ಈ ಹೆಲಿಕಾಪ್ಟರ್ ಪತ್ತೆಗೆ ಶೋಧ ನಡೆಯುತ್ತಿದೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!