ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ಇನ್ಮುಂದೆ ಮಕ್ಕಳನ್ನು ಶಾಲೆಗೆ ಬಿಡೋದಕ್ಕೂ ಹೆಲ್ಮೆಟ್ ಹಾಕಿಸಿಕೊಂಡು ಹೋಗೋದು ಕಡ್ಡಾಯವಾಗಿದೆ. ಹೌದು, ಆರು ವರ್ಷ, ಆರು ವರ್ಷ ಮೇಲ್ಪಟ್ಟ ಮಕ್ಕಳಿಗೆ ಹೆಲ್ಮೆಡ್ ಕಡ್ಡಾಯ ಎಂದು ಸಂಚಾರಿ ಪೊಲೀಸರು ಆದೇಶ ಹೊರಡಿಸಿದ್ದಾರೆ.
ಸಾಕಷ್ಟು ಪೋಷಕರು ತಾವು ಹೆಲ್ಮೆಟ್ ಧರಿಸಿ ಮೂರಕ್ಕಿಂತ ಹೆಚ್ಚು ಮಕ್ಕಳನ್ನು ಬೈಕ್ ಅಥವಾ ಸ್ಕೂಟಿ ಮೇಲೆ ಕೂರಿಸಿಕೊಂಡು ಶಾಲೆಗೆ ತೆರಳುತ್ತಾರೆ. ಆದರೆ ಹೆಲ್ಮೆಟ್ ಇಲ್ಲದೆ ಅಪಘಾತಗಳಾದಾಗ ಎಷ್ಟೋ ಮಕ್ಕಳಿಗೆ ಹಾನಿಯಾಗಿದೆ. ಇವುಗಳನ್ನು ತಪ್ಪಿಸಲು ಸಂಚಾರಿ ಪೊಲೀಸರು ಹೆಲ್ಮೆಟ್ ಕಡ್ಡಾಯ ಆದೇಶ ನೀಡಿದ್ದಾರೆ.
ಮೂರಕ್ಕೂ ಹೆಚ್ಚು ಮಕ್ಕಳನ್ನು ಗಾಡಿಯಲ್ಲಿ ಕರೆದುಕೊಂಡು ಹೋಗುವಂತಿಲ್ಲ. ಹಾಗೇ ಶಾಲಾ ಆಟೋ, ಖಾಸಗಿ ಕಾರು, ಟಿಟಿ ಸ್ಕೂಲ್ ಬಸ್‌ನಲ್ಲಿ ನಿಗದಿತ ಮಿತಿಗಿಂತ ಹೆಚ್ಚು ಮಕ್ಕಳನ್ನು ಶಾಲೆಗೆ ಕರೆದೊಯ್ಯುವಂತಿಲ್ಲ. ಈ ರೀತಿ ರೂಲ್ಸ್ ಬ್ರೇಕ್ ಮಾಡಿ ತಪ್ಪಿಸಿಕೊಂಡು ಓಡಾಡಿದರೆ ಪೊಲೀಸರು ಮನೆ ಬಾಗಿಲಿಗೆ ಬಂದು ದಂಡ ವಸೂಲಿ ಮಾಡಲಿದ್ದಾರೆ.