ಹೊಸದಿಗಂತ ಹಾಸನ :
ಹೇಮಾವತಿ ಜಲಾಶಯದಿಂದ ಕಡಿಮೆ ಪ್ರಮಾಣದಲ್ಲಿ ನೀರು ಹೊರಹರಿವು ಬಿಡುತ್ತಿರುವ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಇಂದಿನಿಂದ ಪ್ರವೇಶ ನೀಡಲಾಗಿದೆ.
ಹಾಸನ ತಾಲ್ಲೂಕಿನ, ಗೊರೂರಿನಲ್ಲಿರುವ ಹೇಮಾವತಿ ಜಲಾಶಯ ಕಳೆದ ಮೂರು ದಿನಗಳಿಂದ ಅತ್ಯಧಿಕ ಪ್ರಮಾಣದಲ್ಲಿ ಹೊರಹರಿವು ಬಿಡುತ್ತಿದ್ದ ಕಾರಣ ಹೇಮಾವತಿ ಅಣೆಕಟ್ಟು ವಿಭಾಗದ ಅಧಿಕಾರಿಗಳು ಹೇಮಾವತಿ ಜಲಾಶಯಕ್ಕೆ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿತ್ತು. ಮಳೆ ಕಡಿಮೆಯಾದ ಕಾರಣ ಹಾಗೂ ಕಡಿಮೆ ಪ್ರಮಾಣದಲ್ಲಿ ನೀರು ಹೊರಬಿಡುತ್ತಿರುವ ಹಿನ್ನಲೆಯಲ್ಲಿ ಇಂದಿನಿಂದ ಸಾರ್ವಜನಿಕರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.
ಮೂರು ದಿನಗಳಿಂದ ಡ್ಯಾಂ ನೋಡಲು ಬಂದು ಗೇಟ್ ಬಳಿಯೇ ವಾಪಾಸ್ಸಾಗುತ್ತಿದ್ದ ನೂರಾರು ಜನರು ಇಂದು ಆರು ಕ್ರಸ್ಟ್ ಗೇಟ್‌ಗಳಿಂದ 37977 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು ಸಾರ್ವಜನಿಕರು ಹೇಮಾವತಿ ಜಲಾಶಯ ವೀಕ್ಷಣೆ ಮಾಡಬಹುದಾಗಿದೆ.