ಇನ್ಮುಂದೆ ಪೊಲೀಸರು ಅನುಮತಿಯಿಲ್ಲದೆ ಗೃಹ ಸಚಿವರ ಮನೆಗೆ ಹೋಗುವಂತಿಲ್ಲ: ಡಿಜಿಪಿ ಆದೇಶ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಇನ್ಮುಂದೆ ಗೃಹ ಸಚಿವ ಜಿ. ಪರಮೇಶ್ವರ್ ಅವರ ಮನೆಗೆ ಅನುಮತಿಯಿಲ್ಲದೆ ಹೋಗಿ ಭೇಟಿಯಾಗ ಕೂಡದು ಎಂದು ಎಲ್ಲಾ ಹಂತದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅಲೋಕ್ ಮೋಹನ್ ಸೂಚಿಸಿದ್ದಾರೆ.

ವರ್ಗಾವಣೆ ಸಹಿತ ವಿವಿಧ ಕಾರಣಗಳಿಗಾಗಿ ಬೆಂಗಳೂರು ಮಾತ್ರವಲ್ಲದೆ, ರಾಜ್ಯದ ನಾನಾ ಕಡೆಗಳಿಂದ ಎಲ್ಲಾ ಹಂತದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯು ಗೃಹ ಸಚಿವ ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡುತ್ತಿದ್ದರು. ಹೀಗಾಗಿ ಅನುಮತಿಯಿಲ್ಲದೆ ಹೋಮ್ ಮಿನಿಸ್ಟರ್ ಅವರನ್ನು ಖುದ್ದು ಭೇಟಿಯಾಗಬಾರದು ಎಂದು ಡಿಜಿಪಿ ಸೂಚಿಸಿದ್ದಾರೆ.

ವಿಚಾರವಾಗಿ ಅಲೋಕ್ ಮೋಹನ್‌ ಅವರೇ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಮೆಮೋ ಕಳುಹಿಸಿ ಆದೇಶಿಸಿದ್ದಾರೆ.

ಒಂದು ವೇಳೆ ಭೇಟಿ ಮಾಡಲು ಉದ್ದೇಶಿಸಿದರೆ ಡಿಜಿಪಿ ಕಚೇರಿಯಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ರಾಜ್ಯದ ಪೊಲೀಸ್ ಕಮಿಷನರೇಟ್, ಪೊಲೀಸ್ ಇಲಾಖೆಯ ವಿವಿಧ ಘಟಕಗಳ ಮೇಲಾಧಿಕಾರಿಗಳಿಗೆ ಮೆಮೊ ನೀಡಿರುವ ಅಲೋಕ್ ಮೋಹನ್, ಅಧಿಕಾರಿ ಹಾಗೂ ಸಿಬ್ಬಂದಿಗೆ ಅನುಮತಿ ಪಡೆಯದೆ ಸಚಿವರನ್ನು ಭೇಟಿಯಾಗದಂತೆ ಸೂಚಿಸಬೇಕು ಎಂದು ಅದೇಶಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!