LIFE | self respect ಉಳಿಸಿಕೊಳ್ಳೋಕೆ ಹೇಳಬೇಕಾದ 8 ವಿಷಯಗಳಿವು! ಇದಕ್ಕೆ ನೀವು ಎಷ್ಟು ಪ್ರಾಮುಖ್ಯತೆ ಕೊಡ್ತೀರ?

ನೀವು ನಿಮ್ಮನ್ನು ಹೇಗೆ ಅರ್ಥ ಮಾಡಿಕೊಂಡಿದ್ದೀರಿ, ನಿಮ್ಮ ಮೌಲ್ಯಗಳಿಗೆ ನೀವು ಎಷ್ಟು ಬದ್ಧರಾಗಿದ್ದೀರಿ ಎಂಬುದರ ಅರ್ಥವೇ ‘self respect’ ಅಥವಾ ಸ್ವಾಭಿಮಾನ. ಇದು ಬೇರೆಯವರ ಮೆಚ್ಚುಗೆಗೆ ತಕ್ಕ ಹಾಗೆ ಬದಲಾಗದೇ, ನಿಮ್ಮ ನಿಜವಾದ ಸ್ವಭಾವಕ್ಕೆ ನಿಷ್ಠಾವಂತರಾಗಿರುವ ಶಕ್ತಿ. ಈ ಕಾಲದಲ್ಲಿ ಎಲ್ಲರನ್ನೂ ಮೆಚ್ಚಿಸಬೇಕೆಂಬ ಒತ್ತಡದಲ್ಲಿ ನಾವು ಹಲವು ಬಾರಿ ನಮ್ಮ ಆತ್ಮಗೌರವವನ್ನೇ ಬಿಟ್ಟುಬಿಡುತ್ತೇವೆ. ಆದರೆ ಕೆಲವು ಸಂದರ್ಭಗಳಲ್ಲಿ “ಇಲ್ಲ” ಎಂದು ಹೇಳಲು ನಾವು ಕಲಿಯಬೇಕು.

ಗಡಿಗಳನ್ನು ಮೀರುವವರಿಗೆ ‘ಇಲ್ಲ’ ಹೇಳಿ:
ನಿಮ್ಮ ಸಮಯ, ಶಕ್ತಿ ಅಥವಾ ಭಾವನೆಗಳಿಗೆ ಮೌಲ್ಯ ನೀಡದವರಿಗೆ, ಸ್ಪಷ್ಟವಾಗಿ ‘ಇಲ್ಲ’ ಎಂದು ಹೇಳುವುದು ಅನಿವಾರ್ಯ. ಇದು ನಿಮ್ಮ ಮೌಲ್ಯಗಳಿಗೆ ಗೌರವ ನೀಡುವ ಮೊದಲ ಹೆಜ್ಜೆ.

Learning to Say No: Six Methods You Can Use – VirtualSpeech

ನಿಜವಾದ ಸ್ವಭಾವವನ್ನು ಬದಲಾಯಿಸಬೇಡಿ:
ಮೆಚ್ಚುಗೆಗಾಗಿ ನೀವು ಮುಖವಾಡ ಧರಿಸಬೇಡಿ. ನಿಮ್ಮಂತೆ ನೀವು ಇರುವುದರಲ್ಲಿ ಧೈರ್ಯವಿದೆ. ಅದು self respectನ ಮೂಲ.

Self Confidence Illustration

ಶಕ್ತಿಯನ್ನೇ ಕುಗ್ಗಿಸುವ ಸಂಬಂಧಗಳಿಗೆ ವಿದಾಯ:
ಒತ್ತಡ, ಅಸಮಾನತೆ ಅಥವಾ ಮಾನಸಿಕ ಆಘಾತ ನೀಡುವ ಸಂಬಂಧಗಳಿಗೆ ‘ಇಲ್ಲ’ ಎಂದೇ ಹೇಳಿ. ನಿಮ್ಮ ಮನಶ್ಶಾಂತಿ ಮುಖ್ಯ.

Why Self-Respect is Important? 5 Ways to Have Self-Respect For Yourself

ತಪ್ಪುಗಳಿಗೆ ಮೌನವಾಗಬೇಡಿ:
ನಿಮ್ಮ ನಂಬಿಕೆಗೆ ವಿರುದ್ಧವಾದ ಮಾತುಗಳು ಬಂದಾಗ ಮೌನವಾಗಿರುವುದು ಒಳ್ಳೆದಲ್ಲ. ಧೈರ್ಯದಿಂದ ಸತ್ಯದ ಕಡೆ ನಿಲ್ಲಿ. ಸ್ಟಾಂಡ್‌ ತಗೋಳಿ, ಜೋರಾಗಿ ಮಾತಾಡಿ.

4 Ways to Improve Self-Esteem and Self-Worth | TheHopeLine

ಎಲ್ಲರಿಗೂ ‘ಹೌದು’ ಎನ್ನುವ ತಪ್ಪು ಬೇಡ:
ಎಲ್ಲರಿಗೂ ‘ಹೌದು’ ಹೇಳುವುದು ಸುಲಭ, ಆದರೆ ನಿಮ್ಮ ಆರೋಗ್ಯ, ಸಮಯ ಅಥವಾ ಕೆಲಸಕ್ಕೆ ಹಾನಿಯಾಗುತ್ತಿದ್ದರೆ, ನೀವು ‘ಇಲ್ಲ’ ಎಂದು ಹೇಳಿದರೆ ಅದು ಅವರಿಗೆ ತೋರುವ ಅಸಭ್ಯ ವರ್ತನೆ ಅಲ್ಲ, ಅದು ನಿಮ್ಮನ್ನು ನೀವು ಗೌರವಿಸುವುದು ಎಂದರ್ಥ.

You Are Made by the People You Say 'No' to | Entrepreneur

‘ಇಲ್ಲ’ ಎನ್ನುವುದು ಅಸಭ್ಯತೆ ಅಲ್ಲ. ಅದು ನಿಜವಾದ ಸೆಲ್ಪ್ ರೆಸ್ಪೆಕ್ಟ್‌. ಸೆಲ್ಪ್ ರಿಸ್ಪೆಕ್ಟ್‌ ಇರುವ ವ್ಯಕ್ತಿ ಸ್ಪಷ್ಟ, ಧೈರ್ಯಶಾಲಿ ಮತ್ತು ಸಂತುಷ್ಟನಾಗಿರುತ್ತಾನೆ. ಜೀವನದಲ್ಲಿ ಸ್ಪಷ್ಟತೆ, ಧೈರ್ಯ ಮತ್ತು ಸಂತೃಪ್ತಿಗೆ ದಾರಿ ನೀಡುತ್ತದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!