DREAMS| ಎತ್ತರದಿಂದ ಬೀಳುತ್ತಿರುವ ಕನಸು ಬೀಳ್ತಿದ್ಯಾ? ಕಾರಣ ಇದೇ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾತ್ರಿಯಲ್ಲಿ ಕನಸುಗಳು ಬರುವುದು ಸಹಜ…ಆದರೆ, ಕೆಲವು ಕನಸುಗಳು ವಿಚಿತ್ರವಾಗಿರುತ್ತವೆ. ಕೆಲವರಿಗೆ ಸದಾ ಎತ್ತರದ ಸ್ಥಳಗಳಿಂದ ಬೀಳುವ ಕನಸು ಬೀಳುತ್ತಿರುತ್ತದೆ. ಇಂತಹ ಕನಸುಗಳು ಯಾಕೆ ಬೀಳುತ್ತವೆ, ಅವುಗಳ ಹಿಂದಿನ ಅರ್ಥವೇನು? ನೋಡೋಣ.

ಎತ್ತರದ ಸ್ಥಳಗಳಿಂದ ಬೀಳುವ ಕನಸುಗಳು ಸೇರಿದಂತೆ ಕೆಲವು ಕನಸುಗಳು ಸಾಮಾನ್ಯವೆಂದು ಅಧ್ಯಯನಗಳು ತೋರಿಸುತ್ತವೆ. ಬೆಟ್ಟದ ತುದಿಯಿಂದ ಬಿದ್ದಂತೆ ಕನಸುಗಳು ಬರುತ್ತವೆ. ಇಂತಹ ಕನಸು ಬರುವುದಕ್ಕೆ ಪ್ರಮುಖ ಕಾರಣ ಆತ್ಮವಿಶ್ವಾಸ ಇಲ್ಲದಿರುವುದು.   ದುಃಸ್ವಪ್ನಗಳು ನಿದ್ರಾಹೀನತೆ, ಆತಂಕ ಮತ್ತು ಒತ್ತಡದ ಅಸ್ವಸ್ಥತೆ (PTSD)ಗೆ ಕಾರಣವಾಗಬಹುದು.

ಯಾರಾದರೂ ನಿಮ್ಮನ್ನು ಬೆಟ್ಟದ ತುದಿಯಿಂದ ತಳ್ಳುವ ಕನಸು ಕಾಣುವುದು, ಆಕಸ್ಮಿಕವಾಗಿ ಬೆಟ್ಟದಿಂದ ಬೀಳುವುದು ಎಂದರೆ ನಿಮ್ಮಲ್ಲಿ ಆತ್ಮವಿಶ್ವಾಸವಿಲ್ಲ ಎಂದರ್ಥ. ಅಲ್ಲದೆ, ವಿಮಾನದಿಂದ ಪ್ಯಾರಾಚೂಟ್ ಅನ್ನು ಹಾರಿಸಿ ಸುರಕ್ಷತಾ ಜಾಲಕ್ಕೆ ಬೀಳುವ ಕನಸು ಕಂಡರೆ ಭಯಾನಕವಲ್ಲ. ಹಾಗಿದ್ದಲ್ಲಿ, ನೀವು ನಿಮ್ಮನ್ನು ರಕ್ಷಿಸಿಕೊಳ್ಳುತ್ತಿರುವಿರಿ ಎಂಬುದರ ಸಂಕೇತವಾಗಿರಬಹುದು. ಇಂತಹ ಕನಸುಗಳು ಬಿದ್ದಾಗ ನೀವು ಮಲಗಿದ್ದಲ್ಲಿಂದ ಕೆಳಕ್ಕೆ ಬೀಳುವ ಅಪಾಯವೂ ಹೆಚ್ಚು.

ನಿಮ್ಮ ಕನಸುಗಳನ್ನು ಮರೆಯುವ ಮೊದಲು ಅವುಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ ನಿಮಗೆ ನೆನಪಿರುವಂತೆ ಕನಸನ್ನು ವಿವರವಾಗಿ ಬರೆಯಿರಿ. ಮಲಗುವ ಮುನ್ನ ಉಸಿರಾಟದ ವ್ಯಾಯಾಮ ಒಳ್ಳೆಯದು. ಮಲಗುವ ಕೋಣೆಯಿಂದ ಎಲೆಕ್ಟ್ರಾನಿಕ್ಸ್ ವಸ್ತುಗಳಿದ್ದರೆ ತೆಗೆದುಹಾಕಿ.

ನಿರಂತರ ದುಃಸ್ವಪ್ನ, ಆತಂಕ ಮತ್ತು ನಿದ್ರಾಹೀನತೆಯ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಪರಿಹಾರಕ್ಕಾಗಿ ದೈಹಿಕ ಅಥವಾ ಮಾನಸಿಕ ವೈದ್ಯರನ್ನು ಸಂಪರ್ಕಿಸಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!