ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ ಕೆಲಸವಾಗಿದೆ. ಮಕ್ಕಳು ಹಾಗೂ ವೃದ್ಧರ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯವಾಗಿದೆ. ಚಳಿಗಾಲದಲ್ಲಿ ಮನೆಯಲ್ಲಿ, ಬೆಚ್ಚಗಿನ ಪಾನೀಯಗಳನ್ನು ತಯಾರಿಸಿ ಸೇವಿಸಿ. ಚಳಿಗಾಲದಲ್ಲಿ ಆರೋಗ್ಯ ಕಾಪಾಡೋಕೆ ಸಿಂಪಲ್ ಸಲಹೆಗಳಿವು..
ವ್ಯಾಯಾಮ ಮಾಡಿ: ಚಳಿಗಾಲದಲ್ಲಿ ನಿಯಮಿತ ವ್ಯಾಯಾಮವನ್ನು ತಪ್ಪಿಸಬೇಡಿ. ಬೆಳಿಗ್ಗೆ ಸ್ವಲ್ಪ ನಡೆದರೂ ಸಾಕು. ಸೈಕಲ್ ಸವಾರಿ, ಯೋಗ, ಅಥವಾ ಏರೋಬಿಕ್ಸ್‌ನಂತಹ ಚಟುವಟಿಕೆಗಳನ್ನು ಮಾಡಬಹುದು.
ಸೂರ್ಯನ ಬೆಳಕು ಮುಖ್ಯ: ಬೆಳಿಗ್ಗೆ ಸಿಗುವ ಸೂರ್ಯನ ಬೆಳಕಿಗೆ ಮೈಯೊಡ್ಡಿ. ಇದು ವಿಟಮಿನ್ ಡಿ ಕೊರತೆಯನ್ನು ನೀಗಿಸುತ್ತದೆ ಮತ್ತು ಚೈತನ್ಯವನ್ನು ನೀಡುತ್ತದೆ.
ನೀರಿನ ಸೇವನೆ ಮಾಡಿ: ಬಾಯಾರಿಕೆಯಾಗದಿದ್ದರೂ ದಿನಕ್ಕೆ ಮೂರು ಲೀಟರ್ ನೀರನ್ನು ತಪ್ಪದೇ ಕುಡಿಯಿರಿ. ಇದು ಚರ್ಮದ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ ಮತ್ತು ಶೀತ, ಕೆಮ್ಮುಗಳನ್ನು ತಡೆಯುತ್ತದೆ.
ಚರ್ಮದ ಆರೈಕೆ ಮಾಡ್ಲೇಬೇಕು: ತೇವಾಂಶವುಳ್ಳ ಕ್ರೀಂ ಮತ್ತು ಮುಲಾಮುಗಳನ್ನು ನಿಯಮಿತವಾಗಿ ಹಚ್ಚಿಕೊಳ್ಳಿ. ಬೆಳಿಗ್ಗೆ ಮತ್ತು ರಾತ್ರಿ ಇದನ್ನು ಮಾಡುವುದರಿಂದ ಒಣ ಚರ್ಮವನ್ನು ತಡೆಯಬಹುದು.
ಎಣ್ಣೆ ಸ್ನಾನ ಮಿಸ್ ಮಾಡಬೇಡಿ: ವಾರಕ್ಕೊಮ್ಮೆಯಾದರೂ ಎಣ್ಣೆ ಸ್ನಾನ ಮಾಡಿ. ಇದು ಚರ್ಮದ ಸಮಸ್ಯೆಗಳನ್ನು ನಿಯಂತ್ರಿಸಲು ಮತ್ತು ದೇಹದ ನೋವು ನಿವಾರಿಸಲು ಸಹಾಯ ಮಾಡುತ್ತದೆ.

