ಮೀನು ತಿನ್ನೋದಕ್ಕೆ ಇಷ್ಟ ಬಟ್ ಫ್ರೆಶ್ ಆಗಿರದ ಮೀನನ್ನು ತಿಂದರೆ ಆರೋಗ್ಯಕ್ಕೂ ಹಾನಿ, ದುಡ್ಡು ಕೂಡ ವೇಸ್ಟ್. ನಿಮಗೆ ಮೀನನ್ನು ಆರಿಸೋಕೆ ಗೊತ್ತಾಗ್ತಾ ಇಲ್ವಾ? ಇಲ್ಲಿದೆ ಟಿಪ್ಸ್
ತಾಜಾ ಮೀನಿನ ವಾಸನೆ ಹಗುರವಾದ ಸಮುದ್ರದ ವಾಸನೆಯಂತೆ ಇರುತ್ತದೆ, ಕಟುವಾದ ಅಥವಾ ಅಮೋನಿಯದ ವಾಸನೆಯಂತೆ ಇರಬಾರದು. ಕೆಟ್ಟ ವಾಸನೆ ಬಂದರೆ, ಮೀನು ಹಳೆಯದಾಗಿದೆ ಎಂದರ್ಥ.
ಮೀನಿನ ಚರ್ಮ ತೇವ ಮತ್ತು ಹೊಳೆಯುತ್ತಿದ್ದರೆ, ಅದು ತಾಜಾ. ಹಳೆಯ ಮೀನಿನ ಚರ್ಮ ಒಣಗಿದ, ಮಂದ ಮತ್ತು ನಿರ್ಜೀವವಾಗಿ ಕಾಣುತ್ತದೆ.
ಕಿವಿರುಗಳ ಬಣ್ಣ ಗಾಢ ಕೆಂಪು ಅಥವಾ ಗುಲಾಬಿ ಬಣ್ಣದ್ದಾಗಿರಬೇಕು ಮತ್ತು ತೇವವಾಗಿರಬೇಕು. ಕೊಳಕು, ಬಣ್ಣಗೆಟ್ಟ ಅಥವಾ ಒಣಗಿದ ಕಿವಿರುಗಳು ಮೀನು ಹಳೆಯದಾಗಿದೆ ಎಂದು ಸೂಚಿಸುತ್ತದೆ. ಆದರೆ ಕೆಲವರು ಕೆಂಪು ಬಣ್ಣವನ್ನು ಹಚ್ಚಿ ಹಳೆಯ ಮೀನನ್ನು ಮಾರಾಟ ಮಾಡುತ್ತಾರೆ ಗಮನಿಸಿ
ನೀವು ಮೀನನ್ನು ಬೆರಳಿನಿಂದ ಒತ್ತಿದಾಗ ಅದು ಮತ್ತೆ ತನ್ನ ಆಕಾರಕ್ಕೆ ಮರಳಿದರೆ, ಅದು ತಾಜಾ. ಗುಳಿ ಉಳಿದು ಮೀನು ಮೃದುವಾಗಿದ್ದರೆ, ಅದು ಹಳೆಯದಾಗಿದೆ.
ಮಾರುಕಟ್ಟೆ ಅಥವಾ ಮಾಲ್‌ನಿಂದ ಮೀನು ಖರೀದಿಸುತ್ತಿದ್ದರೆ, ಅದನ್ನು ಪುಡಿಮಾಡಿದ ಐಸ್‌ನಲ್ಲಿ ಸಂಗ್ರಹಿಸಲಾಗಿದೆಯೇ ಎಂದು ಗಮನಿಸಿ. ಉತ್ತಮ ಅಂಗಡಿಗಳಲ್ಲಿ ಮೀನನ್ನು ಸರಿಯಾದ ತಂಪಾದ ತಾಪಮಾನದಲ್ಲಿ ಇರಿಸಲಾಗುತ್ತದೆ.