ಹೊಸದಿಗಂತ ಡಿಜಿಟಲ್ ಡೆಸ್ಕ್:
ಅತ್ತಿಬೆಲೆಯ ಪಟಾಕಿ ಗೋಡೌನ್‌ನಲ್ಲಿ ಬೆಂಕಿ ಅವಘಡಕ್ಕೆ ಹದಿನಾಲ್ಕು ಮಂದಿ ಸಜೀವದಹನವಾಗಿರುವ ಘಟನೆ ಹಸಿಯಾಗಿರುವ ಬೆನ್ನಲ್ಲೇ, ಮಂಡ್ಯದ ಮನ್‌ಮುಲ್‌ನಲ್ಲಿ ಇಂದು ಬೆಳಗ್ಗೆ ಹೊತ್ತಿಕೊಂಡ ಬೆಂಕಿ ಆತಂಕ ಸೃಷ್ಟಿಸಿತ್ತು.
ಮಂಡ್ಯದ ಮದ್ದೂರು ಬಳಿಯ ಗೆಜ್ಜಲಗೆರೆಯಲ್ಲಿರುವ ಕಳೆದ ಐದು ತಿಂಗಳ ಹಿಂದೆ ಉದ್ಘಾಟನೆಯಾಗಿದ್ದ ಮಂಡ್ಯ ಜಿಲ್ಲಾ ಸಹಕಾರ ಹಾಲು ಒಕ್ಕೂಟ( ಮನ್ ಮುಲ್)ಕಾರ್ಖಾನೆಗೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಕಿ ಹೊತ್ತಿಕೊಂಡಿದ್ದು, ಮಾಹಿತಿ ಪಡೆದ ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದೆ. ಪ್ಯಾಕಿಂಗ್ ಘಟಕದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ, ಕಾರ್ಮಿಕರೆಲ್ಲ ಹೊರಗೆ ಓಡಿಬಂದಿದ್ದರಿಂದ ಯಾವುದೇ ಜೀವಹಾನಿ ಸಂಭವಿಸಿಲ್ಲ. ಬೆಳಗ್ಗೆ 7 ಗಂಟೆ ವೇಳೆಯಲ್ಲಿ ಬೆಂಕಿ ಕಾಣಿಸಿಕೊಂಡಿರುವುದಾಗಿ ಹೇಳಲಾಗುತ್ತಿದೆ.
ಬೆಂಕಿ ತುಪ್ಪದ ಘಟಕಕ್ಕೂ ಆವರಿಸಿದ್ದು, ಬಾಯ್ಲರ್‌ಗಳು ಸ್ಫೋಟಗೊಂಡಿರುವ ಸಾಧ್ಯತೆ ಹೆಚ್ಚಿದೆ ಅಂತಿದಾರೆ ಸ್ಥಳೀಯರು. ಬೆಂಕಿಯಿಂದಾಗಿ ಕಾರ್ಖಾನೆಯ ಸುತ್ತಮುತ್ತ ದಟ್ಟ ಹೊಗೆ ಆವರಿಸಿದೆ.