ಮೊದಲು ಮಿಕ್ಸಿಗೆ ಪುದೀನ, ಕೊತ್ತಂಬರಿ, ಹಸಿಮೆಣಸು, ಶುಂಠಿ ಬೆಳ್ಳುಳ್ಳಿ ಹಾಗೂ ಕಾಯಿ ಹಾಕಿ ಮಿಕ್ಸಿ ಮಾಡಿ ಇಟ್ಟುಕೊಳ್ಳಿ
ನಂತರ ಕುಕ್ಕರ್‌ಗೆ ಎಣ್ಣೆ, ಸಾಸಿವೆ, ಜೀರಿಗೆ ಹಾಕಿ. ಚಕ್ಕೆ, ಲವಂಗ, ಮರಾಠಿ ಮೊಗ್ಗು, ಪಲಾವ್ ಎಲೆ ಹಾಕಿ
ನಂತರ ಈರುಳ್ಳಿ ಹಾಕಿ ಬಾಡಿಸಿ, ನಂತರ ಟೊಮ್ಯಾಟೊ ಉಪ್ಪು ಹಾಕಿ ಎಣ್ಣೆ ಬಿಡುವವರೆಗೂ ಬಾಡಿಸಿ
ನಂತರ ಮಿಕ್ಸಿ ಮಸಾಲಾ ಹಾಗೂ ಬಟಾಣಿ ಹಾಕಿ. ಇದು ಎಣ್ಣೆ ಬಿಡುವವರೆಗೂ ಸಣ್ಣ ಉರಿಯಲ್ಲಿ ಬೇಯಿಸಿ ನಂತರ ತೊಳೆದ ಅಕ್ಕಿ ಹಾಕಿ
ನಂತರ ಬೇಕಾದಷ್ಟು ಉಪ್ಪು, ನೀರು, ಕಡೆಯಲ್ಲಿ ಒಂದು ಸ್ಪೂನ್ ತುಪ್ಪ ಹಾಕಿ ಮುಚ್ಚಿ. ಎರಡು ವಿಶಲ್ ನಂತರ ಮುಚ್ಚುಳ ತೆಗೆದು ಬಿಸಿ ಬಿಸಿ ಮಿಂಟ್ ಪುಲಾವ್ ಸೇವಿಸಿ