ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಸಾಮಾಗ್ರಿಗಳು:
ಬೇಯಿಸಿದ ಮೊಟ್ಟೆ
ಅರಿಶಿಣ ಪುಡಿ
ಖಾರದ ಪುಡಿ
ಎಣ್ಣೆ
ಸಾಸಿವೆ
ಮೆಂತೆ
ಜೀರಿಗೆ
ಒಣ ಮೆಣಸು
ಹಸಿ ಮೆಣಸು
ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್
ಈರುಳ್ಳಿ
ಕೊತ್ತಂಬರಿ ಪುಡಿ
ಜೀರಿಗೆ ಪುಡಿ
ಹುಣಸೆ ಹಣ್ಣಿನ ರಸ
ಉಪ್ಪು
ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ:
* ಬೇಯಿಸಿದ ಮೊಟ್ಟೆಗಳನ್ನು ಅರ್ಧ ಭಾಗಗಳಾಗಿ ಕತ್ತರಿಸಿ, ಅದಕ್ಕೆ ಅರಿಶಿಣ ಪುಡಿ, ಮೆಣಸಿನ ಪುಡಿ ತುಂಬಿ.
* ಈಗ ಒಂದು ಪಾತ್ರೆಯಲ್ಲಿಎಣ್ಣೆ ಹಾಕಿ ಒಲೆ ಮೇಲೆ ಇಟ್ಟು ಅದರಲ್ಲಿ ಮೊಟ್ಟೆ ಹಾಕಿ, ಮೊಟ್ಟೆಗ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.
* ಈಗ ಮತ್ತೊಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಅದರಲ್ಲಿ ಸಾಸಿವೆ, ಮೆಂತೆ, ಜೀರಿಗೆ ಹಾಕಿ ನಂತರ ಒಣ ಮೆಣಸನ್ನು ಮುರಿದು ಹಾಕಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಒಂದು ನಿಮಿಷ ಹುರಿಯಿರಿ.
* ನಂತರ ಈರುಳ್ಳಿ ಮತ್ತು ಹಸಿ ಮೆಣಸಿನಕಾಯಿ ಹಾಕಿ ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.
* ಈಗ ಅರಿಶಿಣ ಪುಡಿ, ಖಾರದ ಪುಡಿ, ಕೊತ್ತಂಬರಿ ಪುಡಿ, ಜೀರಿಗೆ ಪುಡಿ ಹಾಕಿ ಸೌಟ್ ನಿಂದ ಆಡಿಸಿ. ನಂತರ ನೀರು ಸೇರಿಸಿ. ಅದಕ್ಕೆ ಹುಣಸೆ ಹಣ್ಣಿನ ರಸ ಮತ್ತು ರುಚಿಗೆ ಉಪ್ಪು ಹಾಕಿ ಕಡಿಮೆ ಉರಿಯಲ್ಲಿ 5 ನಿಮಿಷ ಕುದಿಸಿ.
* ಬಳಿಕ ಫ್ರೈ ಮಾಡಿದ ಮೊಟ್ಟೆ ಹಾಕಿ 2 ನಿಮಿಷ ಬಿಸಿ ಮಾಡಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಆಂಧ್ರ ಶೈಲಿಯ ಮೊಟ್ಟೆ ಗ್ರೇವಿ ರೆಡಿ.