ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಸಾಮಾಗ್ರಿಗಳು:
*ಸೇಬು
*ಮೊಟ್ಟೆ
*ಬೆಣ್ಣೆ
*ಸಕ್ಕರೆ
*ಮೈದಾ ಹಿಟ್ಟು
*ವೆನಿಲ್ಲಾ ಎಸೆನ್ಸ್
*ಜೇನು
*ಅಡುಗೆ ಸೋಡಾ
*ಬಾದಾಮಿ ಪುಡಿ
ಮಾಡುವ ವಿಧಾನ:
* ಒಂದು ಪಾತ್ರೆಯಲ್ಲಿ ಸಕ್ಕರೆ, ಮೊಟ್ಟೆ, ಬೆಣ್ಣೆ, ವೆನಿಲ್ಲಾ ಎಸೆನ್ಸ್ ಸೇರಿಸಿ ಚೆನ್ನಾಗಿ ಕಲೆಸಿ.
* ಇದಕ್ಕೆ ಮೈದಾ, ಬಾದಾಮಿ ಪುಡಿ, ಜೇನು ಮತ್ತು ಅಡುಗೆ ಸೋಡಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
* ಈಗ ಸೇಬಿನ ತುಂಡುಗಳನ್ನು ಸೇರಿಸಿ ಹಗುರವಾಗಿ ಮಿಶ್ರಣ ಮಾಡಿ.
* ಒಂದು ಪಾತ್ರೆಯ ಒಳಗೆ ಬೆಣ್ಣೆಯನ್ನು ಸವರಿ ಮಿಶ್ರಣವನ್ನು ಒಳಭಾಗವನ್ನು ಆವರಿಸಿಕೊಳ್ಳುವಂತೆ ತುಂಬಿ.
* ಈಗ ಪಾತ್ರೆಯನ್ನು ಕುಕ್ಕರಿನ ಒಳಗೆ ಕೊಂಚವೇ ನೀರಿನಲ್ಲಿ ಮುಳುಗಿಸಿ ಇಡಿ. ಪಾತ್ರೆಯನ್ನು ಒಂದು ತಟ್ಟೆಯಿಂದ ಮುಚ್ಚಿ, ಕುಕ್ಕರಿನ ಮುಚ್ಚಳ ಕೂಡ ಮುಚ್ಚಿ. ಆದರೆ ಸೀಟಿಯನ್ನು ಹಾಕದೇ ಮಧ್ಯಮ ಉರಿಯಲ್ಲಿ ಸುಮಾರು ಮೂವತ್ತು ನಿಮಿಷ ಬೇಯಿಸಿ.