ಹೊಸದಿಗಂತ ಡಿಜಿಟಲ್ ಡೆಸ್ಕ್:
ದೋಸೆ ಅಂದ್ರೆ ಸಾಮಾನ್ಯವಾಗಿ ಜನರು ಹೆಚ್ಚು ಇಷ್ಟಪಟ್ಟು ತಿನ್ನುತ್ತಾರೆ. ಆದರೆ ಕೆಲವೊಮ್ಮೆ ದೋಸೆ ಬೇಜಾರು ಎನಿಸಿಬಿಡುತ್ತೆ, ಹಾಗಾಗಿ ದೋಸೆಯನ್ನು ವಿಭಿನ್ನವಾಗಿ ಮಾಡಿ ತಿನ್ನೋದ್ರಿಂದ ದೋಸೆ ಮೇಲೆ ನಿಮ್ಮ ಪ್ರೀತಿ ಜಾಸ್ತಿಯಾಗಬಹುದು. ನಿಮಗೂ ಯಾವಾಗ್ಲೂ ಒಂದೇ ರೀತಿಯ ದೋಸೆ ತಿಂದು ಬೇಜಾರಾಗಿದ್ರೆ, ಒಮ್ಮೆ ಮಾಡಿ ನೋಡಿ ಬೀಟ್‌ರೋಟ್ ದೋಸೆ.
ಬೇಕಾಗುವ ಸಾಮಾಗ್ರಿಗಳು:
*ಬೀಟ್‌ರೂಟ್
*ಆಲುಗಡ್ಡೆ
*ಕ್ಯಾರೆಟ್
*ಈರುಳ್ಳಿ
*ಹಸಿಶುಂಠಿ ಪೇಸ್ಟ್
*ಬೆಳ್ಳುಳ್ಳಿ ಪೇಸ್ಟ್
*ಹಸಿಮೆಣಸು
*ಕೆಂಪು ಮೆಣಸಿನ ಪುಡಿ
*ಅರಿಶಿನ ಪುಡಿ
*ಉಪ್ಪು
*ಉದ್ದಿನ ಬೇಳೆ
*ಸಾಸಿವೆ
*ಕರಿಬೇವಿನ ಎಲೆಗಳು
*ಎಣ್ಣೆ
ಮಾಡುವ ವಿಧಾನ:
* ಬೀಟ್‌ರೂಟ್ ಮತ್ತು ಆಲುಗಡ್ಡೆಯನ್ನು ಅಥವಾ (ಕ್ಯಾರೆಟ್ ಇದ್ದರೆ) ಕುಕ್ಕರಿನೊಳಗೆ ಮುಳುಗುವಷ್ಟು ನೀರಿನಲ್ಲಿಟ್ಟು ಉಪ್ಪು ಹಾಕಿ ಎರಡು ಅಥವಾ ಮೂರು ಸೀಟಿ ಬರುವವರೆಗೆ ಬೇಯಿಸಿ.
* ಒಂದು ಬಾಣಲೆ ಅಥವಾ ದಪ್ಪತಳದ ಪಾತ್ರೆಯಲ್ಲಿ ಕೊಂಚ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದ ಬಳಿಕ ಸಾಸಿವೆ, ಉದ್ದಿನ ಬೇಳೆ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಈಗ ಈರುಳ್ಳಿ, ಶುಂಠಿ ಪೇಸ್ಟ್, ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸು ಹಾಕಿ ಈರುಳ್ಳಿ ಹಾಕಿ.
* ಈಗ ಆಲುಗಡ್ಡೆ ಮತ್ತು ಬೀಟ್‌ರೂಟ್‌ಗಳನ್ನು ಒಂದು ಮರದ ಚಮಚ ಅಥವಾ ಸೌಟು ಉಪಯೋಗಿಸಿ ಚೆನ್ನಾಗಿ ಒತ್ತಿ ಮಿಶ್ರಣ ಮಾಡಿ.
* ಒಲೆ ಮೇಲೆ ಈರುಳ್ಳಿ ಚೆನ್ನಾಗಿ ಬೆಂದ ಬಳಿಕ ಜಜ್ಜಿದ ಆಲುಗಡ್ಡೆ ಮತ್ತು ಬೀಟ್‌ರೂಟ್ ಮಿಶ್ರಣವನ್ನು ಸೇರಿಸಿ. ನಂತರ ಮೆಣಸಿನ ಪುಡಿ, ಅರಿಸಿನ ಪುಡಿ, ಕರಿಬೇವಿನ ಎಲೆ ಮತ್ತು ಕೊಂಚ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
* ನಂತರ ನೀರು ಹಾಕಿ ಸುಮಾರು ಮೂರು ನಿಮಿಷಗಳವರೆಗೆ ತಿರುವುತ್ತಾ ನೀರು ಪೂರ್ಣವಾಗಿ ಇಂಗುವವರೆಗೂ ಬೇಯಿಸಿ.
* ಈಗ ಸಿದ್ಧಪಡಿಸಿದ್ದ ದೋಸೆಹಿಟ್ಟನ್ನು ಕಾವಲಿಯ ಮೇಲೆ ತೆಳುವಾಗಿ ಹರಡಿ. ದೋಸೆ ಅರ್ಧ ಬೆಂದ ಬಳಿಕ ಕೊಂಚ ಎಣ್ಣೆಯನ್ನು ಮೇಲಿನಿಂದ ಸವರಿ ನಡುವೆ ಒಂದು ದೊಡ್ಡ ಚಮಚದಷ್ಟು ಗಾತ್ರದ ಮಸಾಲೆಯನ್ನು ಹಾಕಿ ದೋಸೆ ಬೆಂದ ಬಳಿಕ ಎರಡೂ ಬದಿಗಳ ಅಂಚುಗಳು ಮಸಾಲೆಯ ಮೇಲೆ ಬರುವಂತೆ ಮಡಚಿ ಇಡಿಯ ದೋಸೆಯನ್ನು ತಟ್ಟೆಯ ಮೇಲೆ ಅನಾಮತ್ತಾಗಿ ಉಲ್ಟಾ ಮಾಡಿ ಬೇಯಿಸಿ.
ಬಿಸಿಬಿಸಿಯಿರುವ ದೋಸೆಯೊಂದಿಗೆ ತೆಂಗಿನ ತುರಿ ಚಟ್ನಿ ಮಾಡಿ ತಿಂದು ಸವಿಯಿರಿ.