ಹೊಸದಿಗಂತ ಡಿಜಿಟಲ್ ಡೆಸ್ಕ್:
ವಾರಾಂತ್ಯ ಬಂದರೆ ಮನೆಯಿಂದ ಆಚೆ ಹೋಗ್ಬೇಕು, ಏನಾದರು ತಿನ್ನಬೇಕು ಅಂತ ಆಸೆಯಾಗುತ್ತೆ, ಆದರೆ ಮನೆಯಿಂದ ಹೊರಗಡೆ ಹೋಗಿ ತಿನ್ನುವ ಬದಲು ಮನೆಯಲ್ಲೇ ಮಾಡಿ ನೋಡಿ ಸರಳವಾದ ಬ್ರೆಡ್ ಪಿಜ್ಜಾ. ಇದನ್ನು ಮಾಡಲು ಬೇಕಿರುವ ಸಾಮಾಗ್ರಿಗಳು ಮತ್ತು ಮಾಡುವ ವಿಧಾನ ಇಲ್ಲಿ ತಿಳಿಯಿರಿ.
ಬೇಕಾಗುವ ಸಾಮಾಗ್ರಿಗಳು:
* ಬ್ರೆಡ್
* ಈರುಳ್ಳಿ
* ಕ್ಯಾಪ್ಸಿಕಮ್
* ಚೀಸ್
* ಟೊಮೆಟೋ ಸಾಸ್ ಅಥವಾ ಪಿಜ್ಜಾ ಸಾಸ್
* ಕಾಳುಮೆಣಸಿನಪುಡಿ ಅಥವಾ ಇಟಾಲಿಯನ್ ಮಸಾಲೆ
* ಚಿಲ್ಲಿ ಫ್ಲೇಕ್ಸ್
* ಕ್ಯಾರೆಟ್
* ಕ್ಯಾಬೇಜ್
ಮಾಡುವ ವಿಧಾನ:
* ಮೊದಲು ಬ್ರೆಡ್‍ನ ಒಂದು ಬದಿಗೆ ಟೊಮೆಟೋ ಸಾಸ್ ಸವರಿಡಬೇಕು.
* ನಂತರ ಅದರ ಮೇಲೆ ಸಣ್ಣಗೆ ಕಟ್ ಮಾಡಿದ ಈರುಳ್ಳಿಯನ್ನು ಹರಡಿ.
* ಬಳಿಕ ಸಣ್ಣಗೆ ಕಟ್ ಮಾಡಿದ ಕ್ಯಾಪ್ಸಿಕಮ್ ಪೀಸ್‍ಗಳನ್ನು ಹಾಕಿ. ಹಾಗೆಯೇ ಪೆಪ್ಪರ್ ಪೌಡರ್ ಮತ್ತು ಚಿಲ್ಲಿ ಫ್ಲೇಕ್ಸ್ ಹರಡಿ.
* ಬಳಿಕ ಚೀಸ್ ಕೂಡ ಅದರ ಮೇಲೆ ಹರಡಿ.
* ಈಗ ಸಣ್ಣಗೆ ಕಟ್ ಮಾಡಿದ ಟೊಮೆಟೋ, ಕ್ಯಾರೆಟ್, ಕ್ಯಾಬೇಜ್ ಗಳನ್ನು ಹರಡಬಹುದು.
* ನಂತರ ಒಲೆಯ ಮೇಲೆ ತವಾ ಇಟ್ಟು ಬಿಸಿಯಾದ ಬಳಿಕ ಅದಕ್ಕೆ ಸ್ವಲ್ಪ ತುಪ್ಪ ಸವರಿ ಚೀಸ್ ಕರಗುವವರೆಗೆ ಅಂದ್ರೆ 5-7 ನಿಮಿಷಗಳ ಕಾಲ ಒಲೆಯಲ್ಲಿ ಬಿಸಿ ಮಾಡಿ. ಈಗ ಬಿಸಿ ಬಿಸಿಯಾದ ಮತ್ತು ಸರಳವಾದ ಬ್ರೆಡ್ ಪಿಜ್ಜಾ ಸವಿಯಲು ಸಿದ್ಧ.