ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದೆಡೆ ಮಳೆ, ಮತ್ತೊಂದೆಡೆ ತಂಪಾದ ವಾತಾವರಣ, ಈ ವೇಳೆ ನಿಮ್ಮ ದೇಹವನ್ನು ಸದೃಢವಾಗಿಟ್ಟುಕೊಳ್ಳಲು ಬ್ರೊಕೋಲಿ ಸೂಪ್ ಅನ್ನು ಮಾಡಿ ಸವಿದು ನೋಡಿ. ಬ್ರೊಕೋಲಿ ಸೂಪ್ ಮಾಡುವುದು ಹೇಗೆ ಎಂದು ಇಲ್ಲಿ ತಿಳಿದುಕೊಳ್ಳಿ.
ಬೇಕಾಗುವ ಪದಾರ್ಥಗಳು:
* ಬ್ರೊಕೊಲಿ
* ಈರುಳ್ಳಿ
* ಬೆಳ್ಳುಳ್ಳಿ
* ಹಾಲು
* ನೀರು
* ಉಪ್ಪು
* ಮೆಣಸಿನ ಪುಡಿ
* ಸ್ವಲ್ಪ ಬೆಣ್ಣೆ
ಮಾಡುವ ವಿಧಾನ:
* ಬ್ರೊಕೊಲಿಯನ್ನು ಮೊದಲು ಚೆನ್ನಾಗಿ ತೊಳೆದು ಚಿಕ್ಕ ಚಿಕ್ಕದಾಗಿ ಕತ್ತರಿಸಿಕೊಳ್ಳಬೇಕು. ಉಪ್ಪು ಬೆರೆಸಿದ ನೀರಿನಲ್ಲಿ ಕೆಲ ಕಾಲ ನೆನೆಸಿ ನೀರು ಬಸಿಯಬೇಕು.
* ಚಿಕ್ಕ ಬಾಣಲೆಗೆ ಎಣ್ಣೆ ಬೆಣ್ಣೆ ಹಾಕಬೇಕು. ನಂತರ ಬ್ರೊಕೊಲಿ ಹಾಕಿ ಬೆಳ್ಳುಳ್ಳಿ ಎಸಳು ಮತ್ತು ಕತ್ತರಿಸಿದ ಈರುಳ್ಳಿಯನ್ನು ಹಾಕಬೇಕು. ನಂತರ ಉಪ್ಪು ಮತ್ತು ಮೆಣಸಿನ ಪುಡಿ ಬೆರೆಸಿ.
* ಈಗ ನೀರು ಅಥವಾ ತರಕಾರಿ ಬೇಯಿಸಿದ ನೀರು ಹಾಕಿ ಚೆನ್ನಾಗಿ ತಿರುಗಿಸಬೇಕು. ಬೇಯಲು ಬಿಟ್ಟು 5-10 ನಿಮಿಷ ಕುದಿಸಿದ ನಂತರ ಹಾಲನ್ನು ಬೆರೆಸಬೇಕು. ಈ ಮಿಶ್ರಣ ಗಟ್ಟಿಯಾಗುವವರೆಗೂ ಬೇಯಿಸಿದರೆ ಮೈ ಚಳಿ ಬಿಡಿಸುವ ಬ್ರೊಕೊಲಿ ಸೂಪ್ ಸಿವಿಯಲು ಸಿದ್ಧ.