ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಲೆಕೋಸಿನಿಂದ ಹಲವಾರು ಆರೋಗ್ಯಕರ ಆಹಾರಗಳನ್ನು ತಯಾರಿಸಬಹುದು. ಆದರೆ ಪಲಾವ್ ಅಂದ್ರೆ ಇಷ್ಟ ಪಡೋರು ಒಮ್ಮೆ ಈ ಎಲೆಕೋಸಿನ ಪಲಾವ್ ಅನ್ನು ಮಾಡಿ ಸವಿಯಿರಿ.
ಬೇಕಾಗುವ ಸಾಮಗ್ರಿಗಳು
* ಅಕ್ಕಿ
* ಎಲೆ ಕೋಸು
* ಈರುಳ್ಳಿ
* ಎಣ್ಣೆ
* ಉಪ್ಪು
* ತೆಂಗಿನ ತುರಿ
* ಹುರಿಗಡಲೆ
* ಮೆಣಸಿನಕಾಯಿ
* ಸ್ವಲ್ಪ ಶುಂಠಿ
* ಕೊತ್ತಂಬರಿ
* ಕರಿಬೇವು
* ಸಾಸಿವೆ
* ಕಡಲೆ ಬೇಳೆ
* ಉದ್ದಿನ ಬೇಳೆ
* ಜೀರಿಗೆ
* ಗೋಡಂಬಿ
ಮಾಡುವ ವಿಧಾನ
* ಮೊದಲಿಗೆ ಅನ್ನವನ್ನು ಮಾಡಿಕೊಳ್ಳಿ
* ನಂತರ ಹಸಿರು ಮೆಣಸಿನಕಾಯಿ, ಶುಂಠಿ, ತೆಂಗಿನ ತುರಿ, ಹುರಿಗಡಲೆಯನ್ನು ಸ್ವಲ್ಪ ನೀರಿನೊಂದಿಗೆ ರುಬ್ಬಿಕೊಳ್ಳಬೇಕು.
* ಪಾತ್ರೆಯೊಂದರಲ್ಲಿ ಎಣ್ಣೆ ಕಾಯಿಸಿ ಅದರಲ್ಲಿ ಸಾಸಿವೆ, ಉದ್ದಿನ ಬೇಳೆ, ಕಡಲೆ ಬೇಳೆ, ಜೀರಿಗೆಯನ್ನು ಹಾಕಿ ಹುರಿಯಿರಿ.
* ಕತ್ತರಿಸಿದ ಈರುಳ್ಳಿಯನ್ನು ಬೆರೆಸಿ ಗರಿ ಗರಿಯಾಗುವಂತೆ ಹುರಿಯಬೇಕು. * ನಂತರ ಚಿಕ್ಕ ಚಿಕ್ಕದಾಗಿ ಕತ್ತರಿಸಿಕೊಂಡಿದ್ದ ಎಲೆ ಕೋಸನ್ನು ಹಾಕಿ ಬೇಯುವವರೆಗು ಹುರಿಯಿರಿ.
* ತದನಂತರ ರುಬ್ಬಿಕೊಂಡ ಮಸಾಲೆಯನ್ನು ಇದಕ್ಕೆ ಬೆರೆಸಿ 10 ನಿಮಿಷ ಸಣ್ಣಗಿನ ಉರಿಯಲ್ಲಿ ಹುರಿಯಿರಿ
* ಈಗ ಅನ್ನ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ 5 ನಿಮಿಷ ಹುರಿಯಬೇಕು
* ಕೊನೆಯಲ್ಲಿ ಕೊತ್ತಂಬರಿ, ಕರಿಬೇವು ಮತ್ತು ಹುರಿದ ಗೋಡಂಬಿಯನ್ನು ಅನ್ನದ ಮೇಲೆ ಉದುರಿಸಿದರೆ ಎಲೆಕೋಸಿನ ಪಲಾವ್ ತಿನ್ನಲು ಸಿದ್ಧ.