ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ಯಾರೆಟ್ ಹಲ್ವಾ ತಿಂದಿರುತ್ತೀರಿ ಆದರೆ ಕ್ಯಾರೆಟ್ ನಿಂದ ಮಾಡುವ ಪಾಯಸವನ್ನು ಸವಿದಿದ್ದೀರಾ? ಇಲ್ಲಾಂದ್ರೆ ಈಗಲೇ ಮಾಡಿ ನೋಡಿ ಕ್ಯಾರೆಟ್ ಹೆಸರು ಬೇಳೆ ಪಾಯಸ.
ಬೇಕಾಗುವ ಸಾಮಾಗ್ರಿಗಳು
* ಹೆಸರುಬೇಳೆ
* ಕ್ಯಾರೆಟ್
* ಸಕ್ಕರೆ
* ತೆಂಗಿನಕಾಯಿ
* ಉಪ್ಪು
* ಏಲಕ್ಕಿ ಪುಡಿ
* ದ್ರಾಕ್ಷಿ, ಗೋಡಂಬಿ ಚೂರುಗಳು
ಮಾಡುವ ವಿಧಾನ
* ಮೊದಲು ಕ್ಯಾರೆಟ್ ಅನ್ನು ಹೆಚ್ಚಿಕೊಳ್ಳಿ.
* ಒಂದು ಪಾತ್ರೆಯಲ್ಲಿ ನೀರು ಹಾಕಿ ಅದಕ್ಕೆ ಕ್ಯಾರೆಟ್ ಸೇರಿಸಿ ಬೇಯಿಸಿ.
* ಮತ್ತೊಂದೆಡೆ ಒಂದು ಲೋಟ ಹೆಸರುಬೇಳೆಗೆ ಮೂರು ಲೋಟ ನೀರು ಹಾಕಿ ಕುಕ್ಕರಿನಲ್ಲಿಟ್ಟು 2 ವಿಶಲ್ ಬರುವವರೆಗೆ ಬೇಯಿಸಬೇಕು.
* ನಂತರ ಬೇಯಿಸಿಟ್ಟ ಹೆಸರುಬೇಳೆ, ಕ್ಯಾರೆಟ್, ಉಪ್ಪು, ಸಕ್ಕರೆ, ಗೋಡಂಬಿ ಹಾಗೂ ದ್ರಾಕ್ಷಿ ಚೂರುಗಳನ್ನು ಹಾಕಿ, ಸ್ವಲ್ಪ ನೀರನ್ನೂ ಸೇರಿಸಿ ಚೆನ್ನಾಗಿ ಕುದಿಸಬೇಕು.
* ಈಗ ತಾಜಾ ತೆಂಗಿನ ಹಾಲನ್ನು ಹಾಕಿ ಮತ್ತೊಮ್ಮೆ ಕುದಿಸಬೇಕು.
* ಅಂತಿಮವಾಗಿ ಏಲಕ್ಕಿ ಪುಡಿಯನ್ನು ಹಾಕಿ ಒಮ್ಮೆ ಮಿಕ್ಸ್ ಮಾಡಿದರೆ ಕ್ಯಾರೆಟ್ ಹೆಸರು ಬೇಳೆ ಪಾಯಸ ಸವಿಯಲು ಸಿದ್ಧ.