ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಸಾಮಾಗ್ರಿಗಳು:
ಕೊತ್ತಂಬರಿ ಸೊಪ್ಪು
ಮೊಸರು
ಬೆಳ್ಳುಳ್ಳಿ ಎಸಳು
ಈರುಳ್ಳಿ
ಹಸಿಮೆಣಸಿನ ಕಾಯಿ
ಉಪ್ಪು
ಜೀರಿಗೆ
ನಿಂಬೆ ಹಣ್ಣಿನ ರಸ
ಎಣ್ಣೆ
ಮಾಡುವ ವಿಧಾನ:
* ಮೊದಲು ತವಾದಲ್ಲಿ ಜೀರಿಗೆ ಹಾಕಿ ರೋಸ್ಟ್ ಮಾಡಿ.
* ನಂತರ ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ಅದರಲ್ಲಿ ಬೆಳ್ಳುಳ್ಳಿಯನ್ನು ಹಾಕಿ ಹುರಿಯಿರಿ.
* ಈಗ ಕೊತ್ತಂಬರಿ ಸೊಪ್ಪನ್ನು ಶುಚಿ ಮಾಡಿ ಒಂದು ಬಟ್ಟಲಿನಲ್ಲಿ ಹಾಕಬೇಕು. ಅದಕ್ಕೆ ಕತ್ತರಿಸಿದ ಮೆಣಸಿನ ಕಾಯಿ, ಕತ್ತರಿಸಿದ ಈರುಳ್ಳಿ, ರೋಸ್ಟ್ ಮಾಡಿದ ಜೀರಿಗೆ, ಫ್ರೈ ಮಾಡಿದ ಬೆಳ್ಳುಳ್ಳಿ ಹಾಗೂ ರುಚಿಗೆ ತಕ್ಕ ಉಪ್ಪು ಹಾಕಿ ಮಿಕ್ಸಿಯಲ್ಲಿ ಹಾಕಿ ಅದಕ್ಕೆ ಮೊಸರು ಹಾಕಿ ನುಣ್ಣಗೆ ರುಬ್ಬಬೇಕು.
* ಈಗ ರೆಡಿಯಾದ ಕೊತ್ತಂಬರಿ ಚಟ್ನಿಗೆ ಸ್ವಲ್ಪ ನಿಂಬೆ ರಸ ಹಿಂಡಿ ಚಟ್ನಿಯ ರುಚಿ ನೋಡಿ.