FOOD| ಈ ಸಾಂಬಾರ್‌ ಮಾಡಲು ಈರುಳ್ಳಿ, ಬೆಳ್ಳುಳ್ಳಿ ಎರಡೂ ಬೇಕಿಲ್ಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಅನೇಕ ಮಂದಿ ಈರುಳ್ಳಿ, ಬೆಳ್ಳುಳ್ಳಿ ಇಲ್ಲದ ಅಡುಗೆಯನ್ನು ತಿನ್ನಲು ಬಯಸುತ್ತಾರೆ. ಅಂತಹವರು ಈರುಳ್ಳಿ ಬೆಳ್ಳುಳ್ಳಿ ಹಾಕದ ಸೌತೆಕಾಯಿ ಸಾರಿನ ರೆಸಿಪಿ ಮಾಡಿ ನೋಡಿ.

ಬೇಕಾಗುವ ಸಾಮಾಗ್ರಿಗಳು

* ಸೌತೆಕಾಯಿ
* ಎಣ್ಣೆ
* ಹೆಸರು ಬೇಳೆ
* ಏಲಕ್ಕಿ
* ಚಕ್ಕೆ
* ಲವಂಗ
* ಅರಿಶಿಣ ಪುಡಿ
* ಉಪ್ಪು

ಮಾಡುವ ವಿಧಾನ

* ಸೌತೆಕಾಯಿಯ ಸಿಪ್ಪೆ ಸುಲಿದು ಒಂದು ಇಂಚಿನಷ್ಟು ಉದ್ದದ ತುಂಡುಗಳಾಗಿ ಕತ್ತರಿಸಿ ಒಂದು ಪಾತ್ರೆಯಲ್ಲಿ ಹಾಕಿ.

* ಮತ್ತೊಂದು ಪಾತ್ರೆಗೆ ಎಣ್ಣೆ ಹಾಕಿ ಅದರಲ್ಲಿ ಹೆಸರು ಬೇಳೆ ಹಾಕಿ 4-5 ನಿಮಿಷ ಹುರಿಯಿರಿ. ನಂತರ ಏಲಕ್ಕಿಯ ಸಿಪ್ಪೆ ಸುಲಿದು ಏಲಕ್ಕಿ ಬೀಜಗಳನ್ನು ಹಾಕಿ. ನಂತರ ಚಕ್ಕೆ ಮತ್ತು ಲವಂಗ ಹಾಕಿ ಸೌಟ್ ನಿಂದ ತಿರುವಿ.

* ಈಗ ಸೌತೆಕಾಯಿ, ರುಚಿಗೆ ತಕ್ಕ ಉಪ್ಪು ಮತ್ತು ಅರಿಶಿಣ ಪುಡಿ ಹಾಕಿ ಸೌತೆಕಾಯಿ ಸ್ವಲ್ಪ ಮೆತ್ತಗಾಗುವವರೆಗೆ ಬೇಯಿಸಿ.

* ಸೌತೆಕಾಯಿ ಬೆಂದು ಸ್ವಲ್ಪ ಮೆತ್ತಗಾದ ಬಳಿಕ ಉರಿಯಿಂದ ಇಳಿಸಿದರೆ ರುಚಿಕರವಾದ ಈರುಳ್ಳಿ, ಬೆಳ್ಳುಳ್ಳಿ ಇಲ್ಲದ ಸೌತೆಕಾಯಿ ಸಂಬಾರ್‌ ಸವಿಯಲು ಸಿದ್ಧ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!