ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಳೆಗಾಲದಲ್ಲಿ ಸಾಮಾನ್ಯವಾಗಿ ನೆಗಡಿ, ಕೆಮ್ಮಿನ ಸಮಸ್ಯೆಗಳು ಎದುರಾಗುತ್ತಿರುತ್ತವೆ. ಈ ರೀತಿಯ ಅನಾರೋಗ್ಯಕ್ಕೆ ಬಿಸಿಬಿಸಿಯಾದ ಶುಂಠಿ ಮತ್ತು ಬೆಳ್ಳುಳ್ಳಿ ಸೂಪ್ ರಾಮಬಾಣವಾಗಿ ಕೆಲಸ ಮಾಡುತ್ತದೆ. ಇದರಲ್ಲಿ ರೋಗ ನಿರೋಧಕ ಶಕ್ತಿ ಅಡಗಿದ್ದು, ತುಂಬಾ ಸಿಂಪಲ್ ಆಗಿ ಮನೆಯಲ್ಲಿಯೇ ಮಾಡಿ ಸೇವಿಸಿ ಶುಂಠಿ ಬೆಳ್ಳುಳ್ಳಿ ಸೂಪ್.
ಬೇಕಾಗುವ ಸಾಮಗ್ರಿಗಳು:
ಕರಿಮೆಣಸು
ಶುಂಠಿ
ಬೆಳ್ಳುಳ್ಳಿ
ತುಪ್ಪ
ಎಲೆಕೋಸು
ಕ್ಯಾರೆಟ್
ನೀರು
ಉಪ್ಪು
ಜೋಳದ ಹಿಟ್ಟು
ಮಾಡುವ ವಿಧಾನ:
* ಮೊದಲಿಗೆ ಕರಿಮೆಣಸನ್ನು ಕುಟ್ಟಿ ಪುಡಿ ಮಾಡಿಟ್ಟುಕೊಳ್ಳಿ. ಬಳಿಕ ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಒಟ್ಟಿಗೆ ಹಾಕಿ ಜಜ್ಜಿಕೊಳ್ಳಿ.
* ಬಳಿಕ ಒಂದು ಪಾತ್ರೆಗೆ ಅರ್ಧ ಚಮಚ ತುಪ್ಪ ಹಾಕಿಕೊಂಡು ನಂತರ ಅದಕ್ಕೆ ಜಜ್ಜಿರುವ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನ್ನು ಹಾಕಿಕೊಂಡು ಲೋ ಫ್ಲೇಮ್‌ನಲ್ಲಿ ಫ್ರೈ ಮಾಡಿ.
* ಈಗ ಇದಕ್ಕೆ ಹೆಚ್ಚಿದ ಎಲೆಕೋಸು ಮತ್ತು ಕ್ಯಾರೆಟ್ ಅನ್ನು ಹಾಕಿಕೊಂಡು ಒಂದರಿಂದ 2 ನಿಮಿಷಗಳವರೆಗೆ ಚೆನ್ನಾಗಿ ಫ್ರೈ ಮಾಡಿ. ಬಳಿಕ ನೀರು ಸೇರಿಸಿಕೊಳ್ಳಿ. ಇದಕ್ಕೆ ಉಪ್ಪನ್ನು ಸೇರಿಸಿ ಕುದಿಸಿ.
* ಈಗ ಒಂದು ಬೌಲಿನಲ್ಲಿ ಜೋಳದ ಹಿಟ್ಟನ್ನು ಹಾಕಿಕೊಂಡು ಅದಕ್ಕೆ ನೀರನ್ನು ಸೇರಿಸಿಕೊಂಡು ತಿರುವಿಕೊಳ್ಳಿ.
* ಈಗ ಕುಟ್ಟಿ ಪುಡಿ ಮಾಡಿದ ಕರಿಮೆಣಸಿನ ಪುಡಿಯನ್ನು ಹಾಕಿಕೊಂಡು ಬಳಿಕ ಇದಕ್ಕೆ ಜೋಳದ ನೀರನ್ನು ಹಾಕಿಕೊಳ್ಳಬೇಕು. ಬಳಿಕ 2 ರಿಂದ 3 ನಿಮಿಷಗಳ ಕಾಲ ಕುದಿಸಿಕೊಳ್ಳಿ.
* ಈಗ ಬಿಸಿಬಿಸಿಯಾದ ಶುಂಠಿ ಬೆಳ್ಳುಳ್ಳಿ ಸೂಪ್ ಸವಿಯಲು ರೆಡಿ.