ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಸಾಮಾಗ್ರಿಗಳು:
ಹಸಿ ಬಟಾಣಿ
ಅಕ್ಕಿ ಹಿಟ್ಟು
ಕಡಲೆ ಹಿಟ್ಟು
ಅರಿಶಿಣ ಪುಡಿ
ಹಸಿ ಮೆಣಸಿನಕಾಯಿ
ಎಣ್ಣೆ
ಪನ್ನೀರ್
ಕ್ಯಾರೆಟ್
ಉಪ್ಪು
ತಯಾರಿಸುವ ವಿಧಾನ
* ಬಟಾಣಿಯನ್ನು 3-4 ಗಂಟೆಗಳ ಕಾಲ ನೀರಿನಲ್ಲಿ ನೆನೆಹಾಕಿ, ಅದನ್ನು ಎರಡು ವಿಷಲ್ ವರೆಗೆ ಬೇಯಿಸಿ. ನಂತರ ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ, ಸ್ವಲ್ಪ ತರಿತರಿಯಾಗಿ ಇರುವಂತೆ ರುಬ್ಬಿಕೊಂಡು ಒಂದು ಬಟ್ಟಲಿಗೆ ಹಾಕಿ.
* ಆ ಬಟ್ಟಲಿಗೆ ಅಕ್ಕಿ ಹಿಟ್ಟು, ಕಡಲೆ ಹಿಟ್ಟು, ಅರಿಶಿಣ ಪುಡಿ, ಹಸಿ ಮೆಣಸಿನ ಕಾಯಿ ಚಿಕ್ಕದಾಗಿ ಕತ್ತರಿಸಿದ ಹಸಿ ಮೆಣಸಿನ ಕಾಯಿ, ಸ್ವಲ್ಪ ನೀರು ಹಾಕಿ ಚೆನ್ನಾಗಿ ಕಲೆಸಿ.
* ಈಗ ಅವುಗಳಿಂದ ಚಿಕ್ಕ, ಚಿಕ್ಕ ಉಂಡೆ ಕಟ್ಟಿ ಕಟ್ಲೇಟ್ ಗೆ ತಟ್ಟುವ ರೀತಿಯಲ್ಲಿ ತಟ್ಟಿ.
* ನಂತರ ತವಾವನ್ನು ಉರಿ ಮೇಲೆಟ್ಟು ಅದಕ್ಕೆ ಎಣ್ಣೆ ಸವರಿ ಬಿಸಿ ಮಾಡಿ ಅದರಲ್ಲಿ ತಟ್ಟಿದ ಹಿಟ್ಟನ್ನು ಹಾಕಿ, ತವಾದ ಬಾಯಿಯನ್ನು ಮುಚ್ಚಿ 2 ನಿಮಿಷ ಬೇಯಿಸಿ. ನಂತರ ಆ ಕಟ್ಲೇಟ್ ಅನ್ನು ಮಗುಚಿ ಹಾಕಿ. ಎರಡೂ ಕಡೆ ಕಂದು ಬಣ್ಣದ ಮೇಲೆ ಒಂದು ಬದಿಯ ಮೇಲೆ ಪನ್ನೀರ್, ಕ್ಯಾರೆಟ್ ಉದುರಿಸಿದರೆ ಹಸಿ ಬಟಾಣಿಯ ಕಟ್ಲೇಟ್ ತಿನ್ನಲು ರೆಡಿ.