ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಸಾಮಗ್ರಿಗಳು:
ಹೆಸರುಬೇಳೆ
ಮೊಸರು
ಕಡಲೆ ಹಿಟ್ಟು
ಅರಿಶಿಣ ಪುಡಿ
ಖಾರದ ಪುಡಿ
ಹಸಿ ಮೆಣಸಿನಕಾಯಿ
ಸಕ್ಕರೆ
ಜೀರಿಗೆ
ಲವಂಗ
ಚಕ್ಕೆ
ಕರಿಬೇವಿನ ಎಲೆ
ಉಪ್ಪು
ಮಾಡುವ ವಿಧಾನ:
* ಮೊದಲು ಹೆಸರುಬೇಳೆಯನ್ನು ಚೆನ್ನಾಗಿ ತೊಳೆದು ನೀರಿನಲ್ಲಿ 2 ಗಂಟೆಗಳ ಕಾಲ ನೆನೆಸಿ.
* ನಂತರ ನೆನೆ ಹಾಕಿದ ನೀರಿನ ಜೊತೆಯೇ ಹೆಸರುಬೇಳೆಯನ್ನು ಕುಕ್ಕರ್ ಗೆ ಹಾಕಿ ಸ್ವಲ್ಪ ನೀರು ಸೇರಿಸಿ, ಉಪ್ಪು ಸೇರಿಸಿ 2 ವಿಶಲ್ ಬರುವವರೆಗೆ ಬೇಯಿಸಿ.
* ಈಗ ಒಂದು ಬಟ್ಟಲಿನಲ್ಲಿ ಮೊಸರು, ಖಾರದ ಪುಡಿ, ಕಡಲೆ ಹಿಟ್ಟು, ಸಕ್ಕರೆ, ರುಚಿಗೆ ತಕ್ಕ ಉಪ್ಪು, ಅರಿಶಿಣ ಪುಡಿ ಹಾಕಿ ಜೊತೆಗೆ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
* ಈಗ ಪ್ಯಾನ್ ಅನ್ನು ಬಿಸಿ ಮಾಡಿ ಅದರಲ್ಲಿ ಎಣ್ಣೆ ಹಾಕಿ, ನಂತರ ಸಾಸಿವೆ, ಕರಿಬೇವಿನ ಎಲೆ, ಹಸಿ ಮೆಣಸಿನಕಾಯಿ, ಜೀರಿಗೆ, ಚಕ್ಕೆ-ಲವಂಗ ಹಾಕಿ 2 ನಿಮಿಷ ಫ್ರೈ ಮಾಡಿ.
* ನಂತರ ಕದಡಿದ ಮೊಸರಿನ ಮಿಶ್ರಣವನ್ನು ಹಾಕಿ ಮಿಕ್ಸ್ ಮಾಡಿ 5 ನಿಮಿಷ ಕುದಿಸಿ
* ಈಗ ಬೇಯಿಸಿದ ಬೇಳೆ, ಸಕ್ಕರೆ, ಉಪ್ಪು ಸೇರಿಸಿ ಕುದಿಸಿದರೆ ಗುಜರಾತಿ ಶೈಲಿಯ ದಾಲ್ ಕರಿ ರೆಡಿ.