ಹೊಸದಿಗಂತ ಡಿಜಿಟಲ್ ಡೆಸ್ಕ್:
ವಾತಾವರಣ ವೈಪರೀತ್ಯದಿಂದಾಗಿ ಅನೇಕರಿಗೆ ಶೀತ, ಗಂಟಲು ಕೆರತದಂತಹ ಆರೋಗ್ಯದ ಸಮಸ್ಯೆಗಳು ಎದುರಾಗುತ್ತಿರುತ್ತವೆ. ಈ ಸಮಯದಲ್ಲಿ ಗರಂ ಆಗಿರುವ ಈ ರಸಂ ಅನ್ನು ಒಮ್ಮೆ ಮಾಡಿ ಸೇವಿಸಿದರೆ ಸಮಸ್ಯೆಯೇ ಮಾಯವಾಗಿ ಬಿಡುತ್ತದೆ.
ಬೇಕಾಗುವ ಸಾಮಾಗ್ರಿಗಳು
ಹುರುಳಿಕಾಳು
ಟೊಮೆಟೊ
ಬೆಳ್ಳುಳ್ಳಿ
ಹುಣಸೆ ಹಣ್ಣಿನ ರಸ
ಅರಿಶಿಣ ಪುಡಿ
ಇಂಗು
ಕರಿ ಮೆಣಸಿನ ಪುಡಿ
ಸಾಸಿವೆ
ಒಣ ಮೆಣಸು
ಕರಿ ಬೇವಿನ ಎಲೆ
ಉಪ್ಪು
ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ:
* ಹುರುಳಿಕಾಳನ್ನು ಬಾಣಲೆಗೆ ಹಾಕಿ ಹುರಿಯಿರಿ. ನಂತರ ತಣ್ಣಗಾದ ಮೇಲೆ ತೊಳೆದು ಪ್ರೆಶರ್ ಕುಕ್ಕರ್ ನಲ್ಲಿ ಹಾಕಿ, ಬೇಯಿಸಲು ತಕ್ಕ ನೀರು ಮತ್ತು ಸ್ವಲ್ಪ ಉಪ್ಪು ಹಾಕಿ 2-3 ವಿಶಲ್ ಬರುವವರೆಗೆ ಬೇಯಿಸಿ.
* ಪಾತ್ರೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ ಸಾಸಿವೆ, ಜೀರಿಗೆ, ಬೆಳ್ಳುಳ್ಳಿ ಹಾಕಿ ಫ್ರೈ ಮಾಡಿ. ನಂತರ ಇಂಗು ಹಾಕಿ, ಒಣ ಮೆಣಸನ್ನು ಮುರಿದು ಹಾಕಿ, ನಂತರ ಕರಿ ಬೇವಿನ ಎಲೆ, ನಂತರ ಟೊಮೆಟೊ ಹಾಕಿ ಮ್ಯಾಶ್ ಮಾಡಿ.
* ನಂತರ ಕರಿ ಮೆಣಸಿನ ಪುಡಿ ಮತ್ತು ಅರಿಶಿಣ ಪುಡಿ ಹಾಕಿ, ಬೇಯಿಸಿದ ಹುರುಳಿಕಾಳು ಹಾಕಿ, ರುಚಿಗೆ ತಕ್ಕ ಉಪ್ಪು ಹಾಕಿ ಕುದಿಸಿ, ನಂತರ ಹುಣಸೆ ಹಣ್ಣಿನ ರಸ ಹಾಕಿ ಮತ್ತೆ 5 ನಿಮಿಷ ಕುದಿಸಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಹುರುಳಿಕಾಳಿನ ಗರಂ ರಸಂ ಸೇವಿಸಲು ಸಿದ್ದ.