ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಸಾಮಾಗ್ರಿಗಳು:
ಕೆನೆ ಹಾಲು
ಸಕ್ಕರೆ
ಕೇಸರಿ ಪಿಸ್ತಾ
ಏಲಕ್ಕಿ ಪುಡಿ
ರೋಸ್ ವಾಟರ್
ಮಾಡುವ ವಿಧಾನ:
- ಒಂದು ದೊಡ್ಡ ಪಾತ್ರೆಗೆ ಹಾಲು ಹಾಕಿ ಒಲೆ ಮೇಲೆ ಇಡಿ.
- ಹಾಲಿಗೆ ಸಕ್ಕರೆ ಹಾಕಿ ಚೆನ್ನಾಗಿ ಕುದಿಸಿ. ನಂತರ ಕೇಸರಿ ಹಾಕಿ ಉರಿ ಕಮ್ಮಿ ಮಾಡಿ.
- ಕಡಿಮೆ ಉರಿಯಲ್ಲಿ ಹಾಲು ಚೆನ್ನಾಗಿ ಕಾಯಿಸಿ. ಇದಕ್ಕೆ ಕಂಡೆನ್ಸ್ಡ್ ಹಾಲು, ಏಲಕ್ಕಿ, ಪಿಸ್ತಾ ಹಾಕಿ.
- ಈಗ ಉರಿಯಿಂದ ಇಳಿಸಿ, ತಣ್ಣಗಾಗಲು ಬಿಡಿ.
- ನಂತರ ಮಂದವಾದ ಈ ಹಾಲನ್ನು ಕುಲ್ಫಿ ಮೌಲ್ಡ್ ನಲ್ಲಿ ತುಂಬಿ, ಅದಕ್ಕೆ ಒಂದು ಕಡ್ಡಿ ಹಾಕಿಟ್ಟು ಒಂದು ರಾತ್ರಿ ಫ್ರಿಜ್ ನಲ್ಲಿ ಇಡಿ.
- ಮರುದಿನ ಕುಲ್ಫಿ ಮೌಲ್ಡ್ ಅನ್ನು ಒಮ್ಮೆ ಬಿಸಿ ನೀರಿನಲ್ಲಿ ಅದ್ದಿ ತೆಗೆದು, ನಂತರ ಕುಲ್ಫಿ ಕಡ್ಡಿಯನ್ನು ಎಳೆಯಿರಿ. ಇಷ್ಟು ಮಾಡಿದರೆ ಕುಲ್ಫಿ ರೆಡಿ.