RECIPE| ಕೆಸುವಿನ ಸೊಪ್ಪಿನ ರೊಟ್ಟಿ ಮಾಡುವ ವಿಧಾನ ಗೊತ್ತಾ? ಇಲ್ಲಾಂದ್ರೆ ಈಗಲೇ ತಿಳಿಯಿರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೆಸುವಿನ ಸೊಪ್ಪಿನಿಂದ ರೊಟ್ಟಿ ಮಾಡೋದು ಹೇಗೆ ಅಂತ ಗೊತ್ತಾ ? ಇಲ್ಲಾಂದ್ರೆ ಈಗಲೇ ಓದಿ ತಿಳಿಯಿರಿ.

ಬೇಕಾಗುವ ಸಾಮಗ್ರಿಗಳು:

ಕೆಸುವಿನ ಸೊಪ್ಪು
ಅಕ್ಕಿ
ಕೊತ್ತುಂಬರಿ ಬೀಜ
ಮೆಂತ್ಯೆ
ಉದ್ದಿನ ಬೇಳೆ
ಜೀರಿಗೆ
ಕೆಂಪು ಮೆಣಸು
ಅರಿಶಿನ
ಉಪ್ಪು
ಹುಣಸೆಹಣ್ಣು
ಬೆಲ್ಲ
ಈರುಳ್ಳಿ
ಬೆಳ್ಳುಳ್ಳಿ (optional)

ಮಾಡುವ ವಿಧಾನ :

* ಮೊದಲು ಅಕ್ಕಿಯನ್ನು ಎರಡು ಘಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ಕೆಸುವಿನ ಸೊಪ್ಪನ್ನು ಮತ್ತು ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಬೆಳ್ಳುಳ್ಳಿ ಇಷ್ಟಪಡುವವರು ಬೆಳ್ಳುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ.
* ಈಗ ಉದ್ದಿನಬೇಳೆ,ಮೆಂತ್ಯೆಯನ್ನು ಕೆಂಪಗೆ ಹುರಿದುಕೊಳ್ಳಿ. ಅದಕ್ಕೆ ಕೊತ್ತುಂಬರಿ ಬೀಜಗಳು, ಜೀರಿಗೆ, ಕೆಂಪುಮೆಣಸು ಸೇರಿಸಿ ಹುರಿಯಿರಿ.
* ಈಗ ನೆನಸಿದ ಅಕ್ಕಿ,ಬೆಲ್ಲ, ಚಿಟಿಕೆ ಅರಿಶಿನ, ಹುಣಸೆ ಹಣ್ಣು ಮತ್ತು ಹುರಿದುಕೊಂಡ ಮಿಶ್ರಣವನ್ನು ಸೇರಿಸಿ ಒಂದು ಲೋಟ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. * ಈಗ ರುಬ್ಬಿಕೊಂಡ ಮಿಶ್ರಣಕ್ಕೆ ಕೆಸುವಿನ ಸೊಪ್ಪು,ಈರುಳ್ಳಿ, ಬೆಳ್ಳುಳ್ಳಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಐದು ನಿಮಿಷ ನೆನೆಯಲು ಬಿಡಿ.
* ನಂತರ ಬಾಳೆಎಲೆಯ ಮೇಲೆ ತೆಳುವಾಗಿ ಹಚ್ಚಿ ಕಾವಲಿಯ ಮೇಲಿಟ್ಟು ಬೇಯಿಸಬಹುದು ಅಥವಾ ನೇರವಾಗಿ ಕಾದ ಕಾವಲಿಗೆ ರೊಟ್ಟಿಯಂತೆ ತೆಳುವಾಗಿ ಹಚ್ಚಿಯೂ ಬೇಯಿಸಬಹುದು. ಬೆಣ್ಣೆಯ ಜೊತೆ ಸವಿಯಲು ಸಿದ್ಧ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!