RECIPE| ಮಲಬಾರ್ ಪಾಲಾಕ್ ದಾಲ್ ಹೀಗೆ ಮಾಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೇಕಾಗುವ ಸಾಮಾಗ್ರಿಗಳು:

ತೊಗರಿ ಬೇಳೆ
ಪಾಲಾಕ್
ಈರುಳ್ಳಿ
ಹಸಿ ಮೆಣಸಿನಕಾಯಿ
ಶುಂಠಿ
ಅರಿಶಿಣ ಪುಡಿ
ಉಪ್ಪು
ಹುಣಸೆ ಹಣ್ಣಿನ ರಸ
ನೀರು

ಮಾಡುವ ವಿಧಾನ:

* ಮೊದಲು ಪಾಲಾಕ್ ಸೊಪ್ಪನ್ನು ಶುದ್ಧ ಮಾಡಿ, ನಂತರ ತೊಗರಿ ಬೇಳೆಯನ್ನು ತೊಳೆದು ಪ್ರೆಶರ್ ಕುಕ್ಕರ್ ನಲ್ಲಿ ಹಾಕಿ, ಈರುಳ್ಳಿ, ಹುಣಸೆ ಹಣ್ಣಿನ ರಸ, ಹಸಿ ಮೆಣಸು, ಸ್ವಲ್ಪ ಜಜ್ಜಿದ ಶುಂಠಿ, ಅರಿಶಿಣ ಪುಡಿ ಹಾಕಿ 2 ಕಪ್ ನೀರು ಹಾಕಿ, ರುಚಿಗೆ ತಕ್ಕ ಉಪ್ಪು ಹಾಕಿ 3 ವಿಶಲ್ ಬರುವವರೆಗೆ ಬೇಯಿಸಿ.
* ನಂತರ ಪ್ಯಾನ್ ಅನ್ನು ಬಿಸಿ ಮಾಡಿ ಅದರಲ್ಲಿ ಎಣ್ಣೆ ಹಾಕಿ. ನಂತರ ಸಾಸಿವೆ, ಬೆಳ್ಳುಳ್ಳಿ ಹಾಕಿ ಫ್ರೈ ಮಾಡಿ, ನಂತರ ಉದ್ದಿನ ಬೇಳೆ, ಒಣ ಮೆಣಸು, ಕರಿ ಬೇವಿನ ಎಲೆ ಒಂದು ನಿಮಿಷ ಫ್ರೈ ಮಾಡಿ.
* ನಂತರ ಬೇಯಿಸಿದ ಪಾಲಾಕ್ ತೊಗರಿ ಬೇಳೆಯನ್ನು ಹಾಕಿ, 5 ನಿಮಿಷ ಕುದಿಸಿ. ಉರಿಯಿಂದ ಕೆಳಗೆ ಇಳಿಸಿದರೆ ಮಲಬಾರ್ ಪಾಲಾಕ್ ದಾಲ್ ಕರಿ ರೆಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!