ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರೋಗ್ಯಕರ ಆಹಾರ ಸೇವಿಸುವುದು ನಮ್ಮ ದಿನನಿತ್ಯದ ಆದ್ಯತೆ. ಹೀಗಿರುವಾಗ ದೇಹಕ್ಕೆ ಅಗತ್ಯ ಪೌಷ್ಠಿಕಾಂಶಗಳನ್ನು ನೀಡುವುದು ಕೂಡ ಮುಖ್ಯ. ದೇಹದ ಸ್ಥಿತಿಗತಿ ಸಮತೋಲನವಾಗಿಡಲು ವಿಭಿನ್ನ ಆಹಾರಗಳನ್ನು ಸೇವಿಸುವುದು ಅತ್ಯಗತ್ಯ. ದೇಹಕ್ಕೆ ತಂಪು ನೀಡುವ ಮೆಂತ್ಯೆ ಪಾಲಕ್ ಸೊಪ್ಪಿನ ಅಕ್ಕಿರೊಟ್ಟಿ ಮಾಡಿ ಸವಿದು ನೋಡಿ.
ಬೇಕಾಗುವ ಸಾಮಾಗ್ರಿಗಳು:
*ಅಕ್ಕಿಹಿಟ್ಟು
*ಮೆಂತೆ ಸೊಪ್ಪು
*ಪಾಲಕ್ ಸೊಪ್ಪು
*ಜೀರಿಗೆ
*ಕಾಯಿತುರಿ
*ಹಸಿಮೆಣಸು
*ಕೊತ್ತಂಬರಿ ಸೊಪ್ಪು
*ಅಡುಗೆ ಎಣ್ಣೆ
*ಉಪ್ಪು
ಮಾಡುವ ವಿಧಾನ:
* ಒಂದು ಪಾತ್ರೆಯಲ್ಲಿ ಮೆಂತೆ ಸೊಪ್ಪು, ಪಾಲಕ್ ಸೊಪ್ಪು, ಜೀರಿಗೆ, ಕಾಯಿತುರಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಉಪ್ಪು ಸೇರಿಸಿ ಕೈಗಳಿಂದ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
* ಈಗ ಇದಕ್ಕೆ ಅಕ್ಕಿ ಹಿಟ್ಟುಹಾಕಿ ನೀರು ಸೇರಿಸುತ್ತಾ ಹೋಗಿ ರೊಟ್ಟಿ ತಟ್ಟುವಷ್ಟು ಹದಕ್ಕೆ ತನ್ನಿ.
* ಒಂದು ದಪ್ಪತಳದ ಕಾವಲಿಯನ್ನು ಮಧ್ಯಮ ಉರಿಯಲ್ಲಿ ಬಿಸಿಮಾಡಿ ಎಣ್ಣೆ ಸವರಿ.
* ಅಕ್ಕಿಹಿಟ್ಟಿನ ಒಂದು ಚಿಕ್ಕ ಮುದ್ದೆಯನ್ನು ಬಾಳೆ ಎಲೆ ಅಥವಾ ಸ್ವಚ್ಛಗೊಳಿಸಿದ ದಪ್ಪ ಪ್ಲಾಸ್ಟಿಕ್ ಹಾಳೆಯ ಮೇಲೆ ಎಣ್ಣೆ ಸವರಿ ರೊಟ್ಟಿಯನ್ನು ತಟ್ಟಿ.
* ಈ ಹಿಟ್ಟನ್ನು ಕಾವಲಿಯ ಮೇಲೆ ಹಾಕಿ ಬೇಯಿಸಿ. ಈ ರುಚಿಯಾದ ಮೆಂತೆ ಪಾಲಕ್ ಸೊಪ್ಪಿನ ಅಕ್ಕಿರೊಟ್ಟಿ ಸವಿಯಲು ಸಿದ್ದ.