ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಲೂಗೆಡ್ಡೆ ಬಳಸಿ ಏನಪ್ಪಾ ವಿಶೇಷವಾದ ಅಡುಗೆ ತಯಾರಿಸೋದು ಅಂತ ಯೋಚಿಸ್ತಿದ್ದೀರಾ?ಹಾಗಿದ್ರೆ ಇಂದೇ ಮಾಡಿ ನೋಡಿ ರುಚಿ ರುಚಿಯಾದ ದಿಢೀರ್ ಪುದಿನಾ ಆಲೂ ಫ್ರೈ.
ಬೇಕಾಗುವ ಸಾಮಾಗ್ರಿಗಳು
ಬೇಯಿಸಿದ ಆಲೂಗೆಡ್ಡೆ
ಕೊತ್ತಂಬರಿ ಸೊಪ್ಪು
ಪುದಿನಾ ಸೊಪ್ಪು
ಶುಂಠಿ
ಹಸಿಮೆಣಸು
ಜೀರಿಗೆ
ಇಂಗು
ಅರಶಿಣ
ಚಿಲ್ಲಿ ಪೌಡರ್
ಉಪ್ಪು
ನಿಂಬೆ ರಸ
ಎಣ್ಣೆ
ಮಾಡುವ ವಿಧಾನ
* ಮೊದಲಿಗೆ ಬೇಯಿಸಿದ ಆಲುಗೆಡ್ಡೆಯನ್ನು ಸಿಪ್ಪೆ ತೆಗೆದು ಕ್ಯೂಬ್ಸ್ ರೀತಿಯಲ್ಲಿ ಹೆಚ್ಚಿಕೊಳ್ಳಿ.
* ಬಳಿಕ ಒಂದು ಮಿಕ್ಸಿ ಜಾರಿಗೆ ಕೊತ್ತಂಬರಿ ಸೊಪ್ಪು, ಪುದಿನಾ ಸೊಪ್ಪು, ಶುಂಠಿ, ನಿಂಬೆ ರಸ ಮತ್ತು ಹಸಿಮೆಣಸಿನಕಾಯಿಗಳನ್ನು ಹಾಕಿಕೊಂಡು ಚೆನ್ನಾಗಿ ರುಬ್ಬಿ.
* ಒಂದು ಕಡಾಯಿಗೆ ಸ್ವಲ್ಪ ಎಣ್ಣೆ ಹಾಕಿ ನಂತರ ಜೀರಿಗೆ ಹಾಕಿ. ಜೀರಿಗೆ ಸ್ವಲ್ಪ ಕೆಂಪಾದ ಮೇಲೆ ಅದಕ್ಕೆ ಇಂಗು, ಬಳಿಕ ರುಬ್ಬಿದ ಪೇಸ್ಟ್ ಅನ್ನು ಹಾಕಿಕೊಳ್ಳಬೇಕು.
* ಈಗ ಅರಶಿಣ, ಚಿಲ್ಲಿ ಪೌಡರ್ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
* ಈಗ ಆಲೂಗೆಡ್ಡೆಗಳನ್ನು ಈ ಮಿಶ್ರಣಕ್ಕೆ ಸೇರಿಸಿಕೊಂಡು ಮಸಾಲೆಗಳು ಇದಕ್ಕೆ ಚನ್ನಾಗಿ ಹೊಂದಿಕೊಳ್ಳುವಂತೆ ಮಿಕ್ಸ್ ಮಾಡಿಕೊಳ್ಳಿ. ನೀರು ಬೆರೆಸಿ 2 ರಿಂದ 3 ನಿಮಿಷಗಳವರೆಗೆ ಬೇಯಿಸಿಕೊಳ್ಳಿ. ಇದೀಗ ಬಿಸಿ ಬಿಸಿಯಾದ ಪುದಿನಾ ಆಲೂ ಫ್ರೈ ಸವಿಯಲು ಸಿದ್ದ.