ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಸಾಮಾಗ್ರಿಗಳು:
ಅಕ್ಕಿ
ಬಟಾಣಿ
ಪನೀರ್
ಪುದೀನಾ
ಈರುಳ್ಳಿ
ಹಸಿ ಮೆಣಸಿನಕಾಯಿ
ಶುಂಠಿ
ಬೆಳ್ಳುಳ್ಳಿ
ಲವಂಗ
ನೀರು
ಎಣ್ಣೆ
ಮಾಡುವ ವಿಧಾನ:
* ಬೆಳ್ಳುಳ್ಳಿ, ಶುಂಠಿ, ಪುದೀನಾವನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಿ.
* ಕುಕ್ಕರ್ ನಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ ಅದಕ್ಕೆ ಚಕ್ಕೆ, ಲವಂಗವನ್ನು ಪುಡಿ ಮಾಡಿ ಹಾಕಿ.
* ನಂತರ ಈರುಳ್ಳಿ, ಪನೀರ್ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ .
* ಈಗ ಹಸಿ ಮೆಣಸಿನಕಾಯಿ, ಬಟಾಣಿ, ಪುದೀನಾ ಪೇಸ್ಟ್ ಹಾಕಿ.
* ಅದಕ್ಕೆ ತೊಳೆದ ಅಕ್ಕಿಯನ್ನು ಹಾಕಿ ಜೊತೆಗೆ ನೀರು ಸೇರಿಸಿ, ಉಪ್ಪು ಹಾಕಿ ಕುಕ್ಕರ್ ಬಾಯಿ ಮುಚ್ಚಿ 2 ವಿಶಲ್ ಬರುವವರೆಗೆ ಬೇಯಿಸಿದರೆ ಪುದೀನಾ ಪನೀರ್ ರೈಸ್ ಸವಿಯಲು ಸಿದ್ಧ.