ಹೊಸದಿಗಂತ ಡಿಜಿಟಲ್ ಡೆಸ್ಕ್:
ಬ್ರೇಕ್ಫಾಸ್ಟ್ ರುಚಿಯಾಗಿದ್ರೆ ದಿನವಿಡೀ ಮನಸ್ಸು ಖುಷಿಯಾಗಿರತ್ತೆ ಅನ್ನೋ ಯೋಚನೆ ನಿಮ್ಮದಾಗಿದ್ರೆ ಈಗಲೇ ಮಾಡಿ ಸವಿದು ನೋಡಿ ಮಶ್ರೂಮ್ ಟೊಮೇಟೊ ಪರೋಟಾ ರೆಸಿಪಿ.
ಬೇಕಾಗುವ ಸಾಮಾಗ್ರಿಗಳು:
ಗೋಧಿ ಹುಡಿ
ಮಶ್ರೂಮ್ಗಳು
ಟೊಮೇಟೊ
ಈರುಳ್ಳಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಮೆಣಸಿನ ಹುಡಿ
ಗರಂ ಮಸಾಲಾ
ಎಣ್ಣೆ
ನೀರು
ಮಾಡುವ ವಿಧಾನ:
* ಮೊದಲು ಹಿಟ್ಟಿಗೆ ನೀರು ಉಪ್ಪು ಸೇರಿಸಿ ಸಿದ್ದಪಡಿಸಿಕೊಳ್ಳಿ.
* ಈಗ ಪ್ಯಾನ್ನಲ್ಲಿ ಎಣ್ಣೆ ಇಡಿ. ಎಣ್ಣೆ ಬಿಸಿಯಾಗುತ್ತಿದ್ದಂತೆ ಹೆಚ್ಚಿದ ಈರುಳ್ಳಿ ಸೇರಿಸಿ ಹುರಿಯಿರಿ. * ಇದೀಗ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಮತ್ತು ಸ್ವಲ್ಪ ಮೆಣಸಿನ ಹುಡಿ ಹಾಕಿ ಹುರಿದುಕೊಳ್ಳಿ. * ಹೆಚ್ಚಿದ ಟೊಮೇಟೊವನ್ನು ಪ್ಯಾನ್ಗೆ ಹಾಕಿ ಮತ್ತು ಚೆನ್ನಾಗಿ ಮಿಶ್ರ ಮಾಡಿ.
* ಟೊಮೇಟೊ ಬೇಯುತ್ತಿದ್ದಂತೆ ಮಶ್ರೂಮ್ ಸೇರಿಸಿ.
* ಈಗ ಉಪ್ಪು ಸೇರಿಸಿ ಮತ್ತು ಮಶ್ರೂಮ್ಗಳನ್ನು ಚೆನ್ನಾಗಿ ತಿರುಗಿಸಿ.
* ಮಶ್ರೂಮ್ ಬೇಯುತ್ತಿರುವಾಗ ಗರಂ ಮಸಾಲಾವನ್ನು ಅದರ ಮೇಲೆ ಚಿಮುಕಿಸಿ ಮತ್ತು ಕೊನೆಯ ಬಾರಿಗೆ ಮತ್ತೊಮ್ಮೆ ತಿರುಗಿಸಿ.
*ಫಿಲ್ಲಿಂಗ್ ಮಾಡಲು
* ಹಿಟ್ಟಿನಿಂದ ಸಣ್ಣ ಉಂಟೆಗಳನ್ನು ಮಾಡಿಕೊಳ್ಳಿ ನಂತರ ಅದನ್ನು ಚಪ್ಪಟೆಯಾಗಿ ಲಟ್ಟಿಸಿಕೊಳ್ಳಿ. * ಮಶ್ರೂಮ್ ತುಂಬಿಸಿ ಪುನಃ ಉಂಡೆ ಮಾಡಿಕೊಳ್ಳಿ ಹಾಗೂ ಪುನಃ ಚಪ್ಪಟೆಯಾಗಿ ಲಟ್ಟಿಸಿಕೊಳ್ಳಿ. ಪರೋಟಾದ ಆಕಾರದಲ್ಲಿ ಫಿಲ್ಲಿಂಗ್ ಅನ್ನು ಲಟ್ಟಿಸಿಕೊಳ್ಳಿ. ಪೂರ್ತಿ ಆದಾಗ ಮಧ್ಯಮ ಉರಿಯಲ್ಲಿ ಪ್ಯಾನ್ನಲ್ಲಿ ಪರೋಟಾವನ್ನು ಬೇಯಿಸಿ. ಈಗ ಟೇಸ್ಟಿ ಮಶ್ರೂಮ್ ಪರೋಟಾ ಸವಿಯಲು ಸಿದ್ಧ.