ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಸಾಮಾಗ್ರಿಗಳು:
* ಈರುಳ್ಳಿ
* ಬೆಳ್ಳುಳ್ಳಿ
* ಹಸಿಮೆಣಸಿನ ಕಾಯಿ
* ಮೆಣಸಿನ ಪುಡಿ
* ಒಳ್ಳೆಣ್ಣೆ
* ಹುಣಸೆಹಣ್ಣಿನ ಗಟ್ಟಿ ರಸ
* ಬೆಲ್ಲ
* ಕರಿ ಬೇವಿನ ಎಲೆ
* ಉಪ್ಪು
ಮಾಡುವ ವಿಧಾನ:
1. ಈರುಳ್ಳಿ ಮತ್ತು ಹಸಿಮೆಣಸಿನ ಕಾಯಿಯನ್ನು ಕತ್ತರಿಸಬೇಕು. ಬೆಳ್ಳುಳ್ಳಿಯನ್ನು ಸಿಪ್ಪೆ ಸುಲಿದು ಇಡಿ.
2. ಈಗ ಒಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಮೇಲಿನ ಮಿಶ್ರಣವನ್ನು ಹಾಕಿ ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು.
3. ನಂತರ ಕಡಿಮೆ ಉರಿ ಮಾಡಿ ಅದಕ್ಕೆ ಮೆಣಸಿನ ಪುಡಿ, ಉಪ್ಪು ಹಾಕಿ. 4. ಈಗ ಬಾಣಲೆಯಲ್ಲಿ ಇರುವ ಮಿಶ್ರಣಕ್ಕೆ ಹುಣಸೆ ಹಣ್ಣಿನ ರಸ ಹಾಕಿ ಕುದಿಸಬೇಕು.
5. ಬೆಲ್ಲವನ್ನು ಪುಡಿ ಮಾಡಿ ಈ ಮಿಶ್ರಣಕ್ಕೆ ಸೇರಿಸಿ ನಂತರ ಕಾಯಿಸಿ.
6. ಉಳಿದ ಎಣ್ಣೆಯನ್ನು ಬಿಸಿ ಮಾಡಿ ಈ ಮಿಶ್ರಣದ ಮೇಲೆ ಸುರಿಯಿರಿ. 7. ಉರಿಯಿಂದ ತೆಗೆದು ಒಂದು ಗಂಟೆ ತಣ್ಣಗಾಗಲು ಇಟ್ಟು ನಂತರ ಡಬ್ಬದಲ್ಲಿ ಮುಚ್ಚಿಡಿ.