ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಸಾಮಾಗ್ರಿಗಳು:
ಪಾಲಾಕ್ ಸೊಪ್ಪು
ಅಣಬೆ
ಈರುಳ್ಳಿ
ಬೆಳ್ಳುಳ್ಳಿ
ಜೀರಿಗೆ
ಹಸಿ ಮೆಣಸಿನಕಾಯಿ
ಕರಿಮೆಣಸಿನ ಪುಡಿ
ಗರಂ ಮಸಾಲ
ಬೆಣ್ಣೆ
ತಯಾರಿಸುವ ವಿಧಾನ:
* ಪಾಲಾಕ್ ಸೊಪ್ಪನ್ನು ಚೆನ್ನಾಗಿ ತೊಳೆದು ಬೇಯಿಸಿ. ನಂತರ ಅದನ್ನು ಬಿಸಿ ನೀರಿನಿಂದ ತೆಗೆದು ತಣ್ಣೀರು ಇರುವ ಪಾತ್ರೆಗೆ ಹಾಕಿ, ಬಳಿಕ ಮಿಕ್ಸಿಯಲ್ಲಿ ಹಾಕಿ ರುಬ್ಬಿ ಒಂದು ಬದಿಯಲ್ಲಿಡಿ.
* ಈಗ ಬಾಣಲೆಗೆ ಬೆಣ್ಣೆ ಹಾಕಿ ಬಿಸಿ ಮಾಡಿ ಅದಕ್ಕೆ ಜೀರಿಗೆ, ಹಸಿ ಮೆಣಸಿನಕಾಯಿ, ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಈಗ ಬೆಳ್ಳುಳ್ಳಿ, ಕರಿ ಮೆಣಸಿನ ಪುಡಿ, ಟೊಮೆಟೊ ಹಾಕಿ ಹುರಿಯಿರಿ.
* ನಂತರ ಅಣಬೆ, ಉಪ್ಪು, ಗರಂ ಮಸಾಲ ಹಾಕಿ.
* ಬಳಿಕ ಪಾಲಾಕ್ ಪೇಸ್ಟ್ ಹಾಕಿ ಮತ್ತೆ 3-4 ನಿಮಿಷ ಬೇಯಿಸಿ ಉರಿಯಿಂದ ಇಳಿಸಿದರೆ ಮಶ್ರೂಮ್-ಪಾಲಾಕ್ ಗ್ರೇವಿ ರೆಡಿ.