BREAKFAST| ಆರೋಗ್ಯಕ್ಕೂ ಹಿತ ಪಾಲಕ್ ಪೂರಿ ರೆಸಿಪಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅನೇಕ ಮಂದಿ ಆರೋಗ್ಯಯುತ ಆಹಾರದ ಬಗ್ಗೆ ಹೆಚ್ಚು ಕಾಳಜಿ ವಹಿಸ್ತಾರೆ. ಹಾಗಾಗಿ ಪೂರಿ ತಿಂಡಿಯಲ್ಲಿ ಎಣ್ಣೆ ಅಂಶ ಜಾಸ್ತಿ ಅಂತೆಲ್ಲಾ ಯೋಚ್ನೆ ಮಾಡ್ತಾರೆ, ಆದ್ರೆ ಆರೋಗ್ಯಕರವಾದ ಪಾಲಕ್‌ ಪೂರಿಯನ್ನು ಒಮ್ಮೆ ಮಾಡಿ ಸವಿದು ನೋಡಿ.

ಪಾಲಕ್ ಪೂರಿಗೆ ಬೇಕಾಗುವ ಸಾಮಾಗ್ರಿಗಳು

ಪಾಲಕ್ ಸೊಪ್ಪು
ಗೋದಿ ಹಿಟ್ಟು
ಓಂ ಕಾಳು(ಅಜವನ ಕಾಳು)
ಹಸಿಮೆಣಸಿನಕಾಯಿ
ಉಪ್ಪು
ನೀರು

ಮಾಡುವ ವಿಧಾನ

* ಮೊದಲು ಪಾಲಕ್ ಸೊಪ್ಪನ್ನು ನೀರಿಯಿಂದ ಚೆನ್ನಾಗಿ ತೊಳೆಯಿರಿ.

* ಒಂದು ಪಾತ್ರೆಗೆ ನೀರು ಹಾಕಿ ಸ್ಟವ್ ಮೇಲೆ ಬಿಸಿ ಮಾಡಲು ಇಡಿ. ನೀರು ಬಿಸಿಯಾದ ಬಳಿಕ ಅದಕ್ಕೆ ತೊಳೆದಿಟ್ಟಿದ್ದ ಪಾಲಕ್ ಸೊಪ್ಪು ಹಾಕಿ ಬೇಯಿಸಿ.

* ಈಗ ಪಾಲಕ್ ಸೊಪ್ಪನ್ನು ಹಾಗೂ ಹಸಿಮೆಣಸನ್ನು ಮಿಕ್ಸಿ ಜಾರ್‍ಗೆ ಹಾಕಿ ರುಬ್ಬಿಕೊಳ್ಳಿ

* ಒಂದು ಪಾತ್ರೆಯಲ್ಲಿ ಗೋದಿ ಹಿಟ್ಟು, ಓಂ ಕಾಳು, ಉಪ್ಪು, ರುಬ್ಬಿಕೊಂಡ ಪಾಲಕ್ ಮಿಶ್ರಣ ಹಾಕಿ ಚೆನ್ನಾಗಿ ಕಲೆಸಿ ಹದವಾಗಿ ಹಿಟ್ಟನ್ನು ಸಿದ್ದಮಾಡಿ.

* ಹಿಟ್ಟಿನಿಂದ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ ಒಂದೊಂದನ್ನು ಪೂರಿ ಆಕಾರಕ್ಕೆ ಲಟ್ಟಿಸಿಕೊಳ್ಳಿ.

* ನಂತರ ಒಂದು ಪಾನ್‍ನಲ್ಲಿ ಎಣ್ಣೆ ಬಿಸಿಗೆ ಇಟ್ಟು, ಅದು ಕಾದ ನಂತರ ಲಟ್ಟಿಸಿಟ್ಟಿದ್ದ ಪೂರಿಗಳನ್ನು ಎಣ್ಣೆಯಲ್ಲಿ ಕರಿಯಿಸಿ. ಬಳಿಕ ಅದನ್ನು ಪ್ಲೇಟ್‍ನಲ್ಲಿ ಹಾಕಿ ಕಾಯಿ ಚಟ್ನಿ ಜೊತೆ ಸವಿದು ನೋಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!