ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೇರಳೆ ಹಣ್ಣು ಮತ್ತು ಒಣದ್ರಾಕ್ಷಿ ಬಳಸಿ ಚಟ್ನಿ ಮಾಡೋದಾ ?ಇದ್ಯಾವ ಚಟ್ನಿ ಅಂತೀರಾ… ಆರೋಗ್ಯಯುಕ್ತವಾದ ಈ ಚಟ್ನಿಯನ್ನು ಒಮ್ಮೆ ಟ್ರೈ ಮಾಡಿ ಸವಿದು ನೋಡಿ.
ಬೇಕಾಗುವ ಸಾಮಾಗ್ರಿಗಳು:
ಪಿಯರ್ಸ್ ಅಥವಾ ಪೇರು ಹಣ್ಣು
ಸಕ್ಕರೆ
ಬಿಳಿ ವಿನಿಗರ್
Balsamic ವಿನಿಗರ್
ಈರುಳ್ಳಿ
ಶುಂಠಿ
ಬೆಳ್ಳುಳ್ಳಿ
ಖಾರದ ಪುಡಿ
ಒಣದ್ರಾಕ್ಷಿ
ಲವಂಗ
ಚಕ್ಕೆ
ಉಪ್ಪು
ಮಾಡುವ ವಿಧಾನ:
* ದೊಡ್ಡ ಪಾತ್ರೆಗೆ ಬಿಳಿ ವಿನೆಗರ್ ಮತ್ತು ಸಕ್ಕರೆ ಹಾಕಿ. ಅದನ್ನು ಉರಿ ಮೇಲೆ ಇಟ್ಟು ಕುದಿಸಿ.
* ಈಗ ಉಳಿದ ಸಾಮಾಗ್ರಿಗಳನ್ನು ಹಾಕಿ, ಕಡಿಮೆ ಉರಿಯಲ್ಲಿ ಒಂದು ಗಂಟೆ ಬೇಯಿಸಿ.
* ನಂತರ ಮಿಶ್ರಣವನ್ನು ಚೆನ್ನಾಗಿ ಮ್ಯಾಶ್ ಮಾಡಿ.
* ಈಗ ಶುದ್ಧೀಕರಿಸಿದ ಜಾರ್ ನಲ್ಲಿ ಹಾಕಿಡಿ.