ಹೊಸದಿಗಂತ ಡಿಜಿಟಲ್ ಡೆಸ್ಕ್:
ಅನೇಕ ಮಂದಿ ಪೊಂಗಲ್ ಅಂದ್ರೆ ಮೂಗು ಮುರಿಯುತ್ತಾರೆ. ಅಂತವರು ಒಮ್ಮೆಯಾದರೂ ಮಾಡಿ ಸವಿದು ನೋಡಿ ಪೋಹಾ ಪೊಂಗಲ್. ಅದನ್ನು ಮಾಡುವುದು ಹೇಗೆ ಮತ್ತು ಅದಕ್ಕೆ ಏನೆಲ್ಲಾ ಸಾಮಗ್ರಿಗಳು ಬೇಕು ಎಂದು ಇಲ್ಲಿ ತಿಳಿಯಿರಿ.
ಬೇಕಾಗುವ ಸಾಮಾಗ್ರಿಗಳು :
ಗಟ್ಟಿ ಅವಲಕ್ಕಿ
ಹುರಿದಿರುವ ಹೆಸರುಬೇಳೆ
ಕಾಳುಮೆಣಸಿನ ಪುಡಿ
ಜೀರಿಗೆ
ಕತ್ತರಿಸಿದ ಹಸಿಮೆಣಸಿನ ಕಾಯಿ
ತೆಂಗಿನಕಾಯಿ ತುರಿ
ಕರಿಬೇವು
ಕೊತ್ತಂಬರಿ
ನಿಂಬೆ ರಸ
ಉಪ್ಪು
ಸಾಸಿವೆ
ಕಡಲೆ ಬೇಳೆ
ಉದ್ದಿನಬೇಳೆ
ತುಪ್ಪ
ಗೋಡಂಬಿ
ಮಾಡುವ ವಿಧಾನ :
ಗಟ್ಟಿ ಅವಲಕ್ಕಿಯನ್ನು ತೊಳೆದು ಅರ್ಧ ಗಂಟೆ ನೆನೆಸಬೇಕು. ಹೆಸರುಬೇಳೆಯನ್ನು ಮೃದುವಾಗಿ ಬೇಯಿಸಿ ನೆನಸಿದ ಅವಲಕ್ಕಿಯನ್ನು ಬೆರೆಸಬೇಕು. ಬಾಣಲೆಯಲ್ಲಿ ತುಪ್ಪ ಕಾಯಿಸಿ ಸಾಸಿವೆ, ಜೀರಿಗೆ, ಕಡಲೆಬೇಳೆ, ಉದ್ದಿನಬೇಳೆ ಹಾಕಿ ಒಗ್ಗರಣೆ ಮಾಡಿಕೊಳ್ಳಿ.
ಒಗ್ಗರಣೆಗೆ ಹಸಿಮೆಣಸಿನಕಾಯಿ, ಕರಿಬೇವಿನ ಎಲೆಗಳು, ಕಾಳುಮೆಣಸಿನ ಪುಡಿ, ಉಪ್ಪು ಹಾಕಿ ಬಾಡಿಸಿಕೊಳ್ಳಬೇಕು. ಒಗ್ಗರಣೆಯ ಮಿಶ್ರಣಕ್ಕೆ ಬೇಯಿಸಿದ ಹೆಸರುಬೇಳೆ, ಅವಲಕ್ಕಿ ಮಿಶ್ರಣ, ಗೋಡಂಬಿ, ನಿಂಬೆರಸ ಹಾಕಿ ಮಗುಚಿ ಒಲೆಯಿಂದ ಕೆಳಗಿಳಿಸಬೇಕು. ಕೊನೆಯಲ್ಲಿ ತೆಂಗಿನ ತುರಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಅವಲಕ್ಕಿ ಪೊಂಗಲ್ ಸವಿಯಲು ಸಿದ್ಧ.