ಅವಲಕ್ಕಿ ರೊಟ್ಟಿ ತಿಂದಿದ್ದೀರಾ? ಇಲ್ಲಾಂದ್ರೆ ಈಗಲೇ ಮಾಡಿ ಸವಿದು ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅಕ್ಕಿ ರೊಟ್ಟಿ ತಿಂದು ತಿಂದು ಬೋರಾಗಿದ್ಯಾ ಹಾಗಿದ್ರೆ ಇಂದೇ ಟ್ರೈ ಮಾಡಿ ತಿಂದು ನೋಡಿ ಅವಲಕ್ಕಿ ರೊಟ್ಟಿ.

ಬೇಕಾಗುವ ಪದಾರ್ಥಗಳು:

ತೆಳು ಅವಲಕ್ಕಿ
ಅಕ್ಕಿ ಹಿಟ್ಟು
ಈರುಳ್ಳಿ
ಕರಿಬೇವಿನ ಎಲೆಗಳು
ಕೊತ್ತಂಬರಿ ಸೊಪ್ಪು
ಶುಂಠಿ
ಮೆಣಸಿನಕಾಯಿ
ಜೀರಿಗೆ
ಉಪ್ಪು
ಬಿಸಿ ನೀರು
ಎಣ್ಣೆ

ಮಾಡುವ ವಿಧಾನ:

* ಮೊದಲು ಒಂದು ಬಟ್ಟಲಿನಲ್ಲಿ ಅವಲಕ್ಕಿ ತೆಗೆದುಕೊಂಡು ನೀರು ಹಾಕಿ ತೊಳೆಯಿರಿ, ಮತ್ತೊಂದು ಬಟ್ಟಲಿಗೆ ಹಾಕಿಡಿ.
* ಈಗ ಅದಕ್ಕೆ 1 ಕಪ್ ಅಕ್ಕಿ ಹಿಟ್ಟು, ಹೆಚ್ಚಿದ ಈರುಳ್ಳಿ, ಹೆಚ್ಚಿದ ಕರಿಬೇವು ಮತ್ತು ಕೊತ್ತಂಬರಿ ಸೇರಿಸಿ. ಈಗ ಶುಂಠಿ, ಮೆಣಸಿನಕಾಯಿ, ಜೀರಿಗೆ ಮತ್ತು ರುಚಿಗೆ ಉಪ್ಪು ಸೇರಿಸಿ.
* ಈಗ ಇದಕ್ಕೆ ಬಿಸಿ ನೀರನ್ನು ಸೇರಿಸಿ, ತಟ್ಟಲು ಸರಿಹೊಂದುವಷ್ಟು ಪ್ರಮಾಣ ಹಿಟ್ಟನ್ನು ಸಿದ್ಧಪಡಿಸಿಕೊಳ್ಳಿ. * ಈಗ ಉಂಡೆ ಗಾತ್ರದ ಹಿಟ್ಟನ್ನು ತೆಗೆದುಕೊಂಡು ನಿಧಾನವಾಗಿ ತೆಳುವಾಗಿ ತಟ್ಟುತ್ತಾ ಬನ್ನಿ.
* ಈಗ ತಟ್ಟಿದ ರೊಟ್ಟಿಯನ್ನು ಬಿಸಿ ತವಾದ ಮೇಲೆ ಹಾಕಿ ಬೇಯಿಸಿ, ನಂತರ ಸವಿಯಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!