ಹೊಸದಿಗಂತ ಡಿಜಿಟಲ್ ಡೆಸ್ಕ್:
ಪರೋಟ ರುಚಿ ನಿಮಗೆಲ್ಲಾ ಗೊತ್ತಿರತ್ತೆ. ಆದರೆ ಮೂಲಂಗಿ ಪರೋಟ ರುಚಿ ನೋಡಿದ್ದೀರಾ? ಇಲ್ಲಾಂದ್ರೆ ಈಗಲೇ ಮಾಡಿ ಸವಿದು ನೋಡಿ ಮೂಲಂಗಿ ಪರೋಟ. ಇದು ಆರೋಗ್ಯಕ್ಕೂ ಹಿತ.
ಬೇಕಾಗುವ ಸಾಮಾಗ್ರಿಗಳು:
*ಮೂಲಂಗಿ
*ಈರುಳ್ಳಿ
*ಬೆಳ್ಳುಳ್ಳಿ ಪೇಸ್ಟ್
*ಜೀರಿಗೆ ಪುಡಿ
*ಅಮೆಚೂರ್
*ಗರಮ್ ಮಸಾಲಾ
*ಕಾಳುಮೆಣಸು
*ಕೊತ್ತಂಬರಿ
*ಉಪ್ಪು
*ಗೋಧಿ ಹಿಟ್ಟು
*ಕಪ್ ನೀರು
* ಎಣ್ಣೆ
ಮಾಡುವ ವಿಧಾನ:
* ಮೊದಲಿಗೆ ತುರಿದ ಮೂಲಂಗಿಯನ್ನು ನೀರಿನಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿ.
* ಈಗ ಈರುಳ್ಳಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಅನ್ನು ಹಾಕಿ ಒಗ್ಗರೆಣ್ಣೆ ಮಾಡಿಕೊಂಡು ಬೇಯಿಸಿದ ಮೂಲಂಗಿಗೆ ಸೇರಿಸಿ.
* ಈಗ ಒಂದು ಪಾತ್ರೆಯಲ್ಲಿ ಹಿಟ್ಟನ್ನು ನೀರು ಹಾಕಿ ಕಲಸಿ. ಸ್ವಲ್ಪ ಸಮಯದ ಬಳಿಕ ಲಟ್ಟಿಸಿಕೊಳ್ಳಿ.
* ಲಟ್ಟಿಸಿಕೊಂಡ ಹಿಟ್ಟಿನ ಮಧ್ಯೆ ಬೇಯಿಸಿದ ಮೂಲಂಗಿಯನ್ನು ಇಡಿ. ನಂತರ ಅರ್ಧಕ್ಕೆ ಮಡಚಿ.ಇದನ್ನು ತ್ರಿಭುಜಾಕಾರದಲ್ಲಿ ಮಡಚಿ ಚಪಾತಿಯಾಕಾರಕ್ಕೆ ಪುನಃ ಲಟ್ಟಿಸಿಕೊಳ್ಳಿ.
* ಈಗ ಒಲೆ ಮೇಲೆ ಪ್ಯಾನ್ ಇಟ್ಟು ಬಿಸಿ ಮಾಡಿ. ಅದರ ಮೇಲೆ ಲಟ್ಟಿಸಿಕೊಂಡ ಪರಟ ಇಟ್ಟು ಬೇಯಿಸಿ. ನಂತರ ಸವಿಯಿರಿ.