ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರತಿನಿತ್ಯ ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಅನ್ನ ಸಾಂಬಾರು ತಿನ್ನೋದು ಅಂತಾದ್ರೆ ಊಟದ ಬಗ್ಗೆ ಆಸಕ್ತಿಯೇ ಇಲ್ಲದಂತಾಗಿಬಿಡುತ್ತದೆ. ಹಾಗಾಗಿ ಆಗಾಗ್ಗೆ ಒಂದಷ್ಟು ವಿಭಿನ್ನ ರೀತಿಯ ಅಡುಗೆಗಳನ್ನು ಮಾಡಿ ಸವಿದು ನೋಡ್ಬೇಕು. ಆಗಲೇ ಊಟದ ರುಚಿಯನ್ನು ಸವಿಯಲು ಸಾಧ್ಯ. ಈಗ ಊಟಕ್ಕೆ ಸಾಂಬಾರು ಬೋರು ಅನ್ನೋರು ಒಮ್ಮೆ ಮಾಡಿ ಸವಿದು ನೋಡಿ ಸಬ್ಬಕ್ಕಿ ಕಿಚಡಿ.
ಬೇಕಾಗುವ ಪದಾರ್ಥಗಳು:
ಸಬ್ಬಕ್ಕಿ/ಸಾಬುದಾನ
ನೀರು
ಎಣ್ಣೆ
ಜೀರಿಗೆ
ಕರಿಬೇವಿನ ಎಲೆ
ತುರಿದ ಶುಂಠಿ
ಮೆಣಸಿನಕಾಯಿ
ಆಲೂಗಡ್ಡೆ
ಹುರಿದ ಕಡಲೆಕಾಯಿ
ಉಪ್ಪು
ಸಕ್ಕರೆ
ನಿಂಬೆ ರಸ
ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ:
* ಸಬ್ಬಕ್ಕಿಯನ್ನು ತೊಳೆದು ಒಂದು ಪಾತ್ರೆಗೆ ಹಾಕಿ, ನಂತರ 5 ರಿಂದ 6 ತಾಸು ನೆನೆಯಲು ಬಿಡಿ.
* ಈಗ ಒಂದು ಪಾತ್ರೆಗೆ ಎಣ್ಣೆ ಹಾಕಿ, ನಂತರ ಜೀರಿಗೆ ಹಾಕಿ. ಆಲೂಗೆಡ್ಡೆ ಹಾಕಿ ಬೇಯಲು ಇಡಿ.
* ಈಗ ಕರಿಬೇವಿನ ಎಲೆ, ಶುಂಠಿ ಹಾಗೂ ಹೆಚ್ಚಿದ ಮೆಣಸಿನಕಾಯಿ ಹಾಕಿ ಫ್ರೈ ಮಾಡಿ.
* ಅದಕ್ಕೆ ಹುರಿದ ಕಡಲೆಕಾಯಿ, ಸಕ್ಕರೆ, ಉಪ್ಪು, ನಿಂಬೆ ರಸ ಹಾಗೂ ನೆನೆಸಿಟ್ಟಿದ್ದ ಸಬ್ಬಕ್ಕಿಯನ್ನು ನೀರಿನಿಂದ ಬೇರ್ಪಡಿಸಿ ಹಾಕಿ.
* ಈಗ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ ಬೇಯಿಸಿ.
* ಕೊನೆಯದಾಗಿ ಕೊತ್ತಂಬರಿ ಸೊಪ್ಪನ್ನು ಸೇರಿಸಿ
ಈಗ ಊಟಕ್ಕೆ ಬಿಸಿ ಬಿಸಿ ಸಬ್ಬಕ್ಕಿ ಕಿಚಡಿ ಸವಿಯಲು ಸಿದ್ದ.