ಲಂಚ್‌ ಬಾಕ್ಸ್‌ಗೆ ಮಾಡಿ ನೋಡಿ ಸ್ವೀಟ್‌ ಕಾರ್ನ್‌ ಫ್ರೈಡ್‌ ರೈಸ್‌ ರೆಸಿಪಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಕ್ಕಳಿಗೆ ದಿನನಿತ್ಯ ಒಂದೇ ರೀತಿಯ ತಿಂಡಿ ತಿನಿಸುಗಳನ್ನು ತಿನ್ನೋದು ಅಂದ್ರೆ ಬೇಜಾರು. ಹಾಗಾಗಿ ಅವರಿಗೆ ಇಷ್ಟವಾಗುವ ರೀತಿಯಲ್ಲಿ ಲಂಚ್‌ಬಾಕ್ಸ್‌ಗೆ ವಿಶೇಷವಾಗಿ ಟ್ರೈ ಮಾಡಿ ಸ್ವೀಟ್‌ ಕಾರ್ನ್‌ ಫ್ರೈಡ್‌ ರೈಸ್‌ ರೆಸಿಪಿ.

ಬೇಕಾಗುವ ಸಾಮಗ್ರಿಗಳು:

ಬಾಸುಮತಿ ಅಕ್ಕಿ
ಸ್ವೀಟ್‌ ಕಾರ್ನ್
ಶುಂಠಿ-ಬೆಳ್ಳುಳ್ಳಿ
ಸೋಯಾ ಸಾಸ್‌
ವಿನೆಗರ್
ಚಿಲ್ಲಿ ಸಾಸ್
ಸ್ಪ್ರಿಂಗ್‌ಆನಿಯನ್‌
ಎಣ್ಣೆ
ಉಪ್ಪು
ಹಸಿ ಮೆಣಸಿನಕಾಯಿ

ಮಾಡುವುದು ಹೇಗೆ?:

* ಮೊದಲು ಅಕ್ಕಿಯನ್ನು ನೀರಿನಲ್ಲಿ 10 ನಿಮಿಷ ನೆನೆಹಾಕಿ. ನಂತರ ಬೇಯಿಸಿ.
* ಇನ್ನೊಂದು ಪಾತ್ರೆಯಲ್ಲಿ ಸ್ವೀಟ್‌ ಕಾರ್ನ್‌ ಬೇಯಿಸಿ.
* ಈಗ ಪ್ಯಾನ್‌ ಬಿಸಿ ಮಾಡಿ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದ ಮೇಲೆ ಅದಕ್ಕೆ ಈರುಳ್ಳಿ, ಸ್ಪ್ರಿಂಗ್‌ ಆನಿಯನ್‌ ಹಾಕಿ. ನಂತರ ಸ್ವೀಟ್‌ ಕಾರ್ನ್ ಸೇರಿಸಿ ಫ್ರೈ ಮಾಡಿ.
* ಈಗ ವಿನೆಗರ್, ಸೋಯಾ ಸಾಸ್, ಚಿಲ್ಲಿ ಸಾಸ್‌ ಹಾಕಿ ಬೇಯಿಸಿ.
* ಈಗ ಸ್ವೀಟ್‌ ಕಾರ್ನ್‌ ಹಾಕಿ ಮಿಶ್ರ ಮಾಡಿ, ಅದಕ್ಕೆ ಉಪ್ಪು ಸೇರಿಸಿ.
* ಈಗ ಬೇಯಿಸಿದ ಅನ್ನ ಹಾಕಿ ಮಿಶ್ರ ಮಾಡಿದರೆ ಸ್ವೀಟ್‌ ಕಾರ್ನ್‌ ಫ್ರೈಡ್‌ ರೈಸ್‌ ರೆಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!