HEALTH| ಮಳೆಗಾಲದಲ್ಲಿ ಈ ಪಾನೀಯಗಳನ್ನು ಕುಡಿದು ರೋಗಗಳಿಗೆ ಹೇಳಿ ಗುಡ್‌ಬೈ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಳೆಗಾಲದಲ್ಲಿ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳುವುದು ನಮ್ಮ ಕೈಲಿರುತ್ತದೆ. ಹಾಗಾಗಿ ಉತ್ತಮ ಆಹಾರ ಸೇವಿಸುವುದರ ಜೊತೆಗೆ ಒಳ್ಳೆಯ ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ ಕೂಡ.

ಹಾಗಾಗಿ ಮಳೆಗಾಲದಲ್ಲಿ ಅನಾರೋಗ್ಯ ಸಮಸ್ಯೆಗಳನ್ನು ದೂರ ಇಡಲು ಈ ಪಾನೀಯಗಳನ್ನು ಕುಡಿಯುವುದು ಹೆಚ್ಚು ಉಪಕಾರಿ.

1. ತುಳಸಿ, ಶುಂಠಿ ಮಿಶ್ರಿತ ಪಾನೀಯ

ಬೇಕಾಗುವ ಸಾಮಗ್ರಿಗಳು:

* ತುಳಸಿ ಎಲೆ
* ಶುಂಠಿ
* ಕಾಳು ಮೆಣಸಿನ ಪುಡಿ
* ಅರಿಶಿಣ ಪುಡಿ
* ಜೇನು

ಮಾಡುವ ವಿಧಾನ:

ಜೇನು ಹೊರತು ಪಡಿಸಿ ಉಳಿದೆಲ್ಲಾ ಸಾಮಗ್ರಿಗಳನ್ನು 2 ಲೋಟ ನೀರಿಗೆ ಹಾಕಿ ಕುದಿಸಿ. ಆ ನೀರು ಒಂದು ಲೋಟಕ್ಕೆ ಬಂದಾಗ ಜೇನು ಸೇರಿಸಿ ಕುಡಿಯಬೇಕು.

2. ಚಕ್ಕೆ, ಶುಂಠಿ ಮಿಶ್ರಿತ ಟೀ

ಮಳೆಗಾಲದಲ್ಲಿ ಸಾಮಾನ್ಯವಾಗಿ ನಾವೆಲ್ಲರು ಕುಡಿಯುವ ಟೀ ಬದಲಿಗೆ ಈ ಬಗೆಯ ಟೀ ಒಳ್ಳೆಯದು.

* ನೀರಿಗೆ ಶುಂಠಿ, ಚಕ್ಕೆ ಹಾಕಿ ಕುದಿಸಿ. ಅದು ಸ್ವಲ್ಪ ತಣ್ಣಗಾದ ಬಳಿಕ ಜೇನು ಸೇರಿಸಿ ಕುಡಿಯಿರಿ.

3. ಮಸಾಲೆ ಟೀ

* ಸಾಮಾನ್ಯವಾಗಿ ಟೀ ಮಾಡುವಾಗ ಅದಕ್ಕೆ ಸ್ವಲ್ಪ ಶುಂಠಿ ಅಥವಾ ಚಕ್ಕೆ ಹಾಕಿ ಕುದಿಸಿ ಮಾಡುವ ಟೀ ಕುಡಿಯುವುದು ಕೂಡ ಒಳ್ಳೆಯದು.

4. ಪುದೀನಾ ಟೀ

* ಬ್ಲ್ಯಾಕ್ ಟೀ ಮಾಡಿ ಅದಕ್ಕೆ ಒಂದು ಎಸಳು ಪುದೀನಾ ಹಾಗೂ ಸ್ವಲ್ಪ ನಿಂಬೆ ರಸ ಹಾಕಿ ಕುಡಿದರೆ ಉತ್ತಮ ಆರೋಗ್ಯದ ಜೊತೆಗೆ ಜೀರ್ಣಕ್ರಿಯೆ ಕೂಡ ಚೆನ್ನಾಗಿರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!