ಮಕ್ಕಳಿಗೆ ಸಾಲಿಡ್ ಫುಡ್ ಆರಂಭಿಸಿದ ನಂತರ ಅವರಿಗೆ ಏನು ತಿನ್ನಿಸಬೇಕು ಎನ್ನುವುದೇ ದೊಡ್ಡ ಪ್ರಶ್ನೆ, ನೂರಾರು ಮಂದಿ ನೂರಾರು ರೀತಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಕೆಲವರು ಕೆಲ ಹಣ್ಣುಗಳನ್ನು ಮಾತ್ರ ತಿನ್ನಿಸಿ ಎನ್ನುತ್ತಾರೆ. ಇನ್ನು ಹಲವರು ಎಲ್ಲ ಹಣ್ಣುಗಳನ್ನು ನೀಡಿ ಎನ್ನುತ್ತಾರೆ. ಒಟ್ಟಾರೆ ಮಕ್ಕಳಿಗೆ ಯಾವ ಹಣ್ಣ ನೀಡಬೇಕು ಇಲ್ಲಿದೆ ಮಾಹಿತಿ..
ಮಕ್ಕಳಿಗೆ ಎಲ್ಲ ಹಣ್ಣುಗಳನ್ನು ನೀಡಲು ಆಗುವುದಿಲ್ಲ. ಯಾವ ಹಣ್ಣುಗಳನ್ನು ನೀಡಬಹುದು ಎಂದರೆ ಪಪಾಯ, ಬಾಳೆಹಣ್ಣು,ಸೇಬು, ಕಿವಿ, ಮಾವಿನಹಣ್ಣು, ಪೀಚ್, ಸಪೋಟ
ಹಣ್ಣನ್ನು ನೀಡುವುದು ಹೇಗೆ?
ಬೇಯಿಸಿ ಪ್ಯೂರಿ ರೀತಿ ನೀಡಬಹುದು ಅಥವಾ ಮ್ಯಾಶ್ ಮಾಡಿ ತಿನ್ನಿಸಿ
ಸೇಬುಹಣ್ಣನ್ನು ಬೇಯಿಸಿ, ಸ್ಪೂನ್ನಲ್ಲಿ ಚೆನ್ನಾಗಿ ಹಿಚುಕಿ ತಿನ್ನಿಸಿ. ಅಥವಾ ಸ್ಪೂನ್ನಲ್ಲಿ ಸೇಬುಹಣ್ಣು ಕೆರೆದು ತಿನ್ನಿಸಿ
ಸಪೋಟ ಹಣ್ಣುಗಳನ್ನು ಕೈಯಿಂತ ಅಥವಾ ಸ್ಪೂನ್ನಲ್ಲಿ ಹಿಚುಕಿ ಜ್ಯೂಸ್ ಮಾಡಿ ಕುಡಿಸಿ