CINE | ಡಾಲಿ ಧನಂಜಯ್‌-ಧನ್ಯತಾ ಮದುವೆ ಸಂಭ್ರಮದ ಫೋಟೊ ಗ್ಯಾಲರಿ ಇಲ್ಲಿದೆ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಡಾಕ್ಟರ್‌ ಧನ್ಯತಾ ಜೊತೆ ನಟ ಡಾಲಿ ಧನಂಜಯ್‌ ಹಸೆಮಣೆ ಏರುತ್ತಿದ್ದಾರೆ. ನಿನ್ನೆಯಷ್ಟೇ ಅರಿಶಿಣ ಶಾಸ್ತ್ರ ಮುಗಿದಿದ್ದು, ಇಂದು ಮತ್ತಷ್ಟು ಶಾಸ್ತ್ರಗಳು ನಡೆದಿದ್ದು ಫೋಟೊಸ್‌ ವೈರಲ್‌ ಆಗುತ್ತದೆ. ತಮ್ಮ ನೆಚ್ಚಿನ ನಟನ ಮದುವೆಯ ಫೋಟೊ ನೋಡಿ ಅಭಿಮಾನಿಗಳು ಥ್ರಿಲ್‌ ಆಗಿದ್ದಾರೆ. ನಟನ ಮದುವೆ ಶಾಸ್ತ್ರದ ಫೋಟೊಸ್‌ ಇಲ್ಲಿದೆ ನೋಡಿ..

ಕೆಲವೇ ಗಂಟೆಗಳಲ್ಲಿ ತಮ್ಮ ಪತ್ನಿಯಾಗಲಿರುವ ವೈದ್ಯೆ ಧನ್ಯತಾ ಅವರ ಹಣೆಗೆ ಹೂ ಮುತ್ತು ನೀಡಿದ್ದು, ಇಂದಿನ ಕಾರ್ಯಕ್ರಮದ ವಿಶೇಷತೆಗಳಲ್ಲಿ ಒಂದು. ಧನ್ಯತಾ ಸಹ ಡಾಲಿ ಹಣೆಗೆ ಹೂ ಮುತ್ತು ನೀಡಿದರು.

ಡಾಲಿ ಧನಂಜಯ್ ಕಾಲಿಗೆ ನಮಸ್ಕರಿಸುವ ಮೂಲಕ ಧನ್ಯತಾ ಆಶೀರ್ವಾದ ಪಡೆದರು. ಈ ವೇಳೆ ವಧು-ವರರ ಸಂಬಂಧಿಕರು ಪರಸ್ಪರರ ಬಗ್ಗೆ ತಮಾಷೆ ಮಾಡುತ್ತಾ, ಛೇಡಿಸಿದ್ದು ಚಿತ್ರದಲ್ಲಿ ಕಾಣಬಹುದು.

ಡಾಲಿ ಧನಂಜಯ್, ಧನ್ಯತಾ ಅವರಿಗೆ ಸಿಹಿ ತಿನ್ನಿಸಿದರು. ಕಾಲುಂಗುರ ತೊಡಿಸಿ, ಪರಸ್ಪರ ಹಾರಗಳನ್ನು ಬದಲಾಯಿಸಿಕೊಂಡು ಪರಸ್ಪರರಿಗೆ ಸಿಹಿ ತಿನ್ನಿಸಲಾಯ್ತು.

ಭಾವಿ ಪತ್ನಿ ಧನ್ಯತಾರ ಕಾಲ ಬೆರಳಿಗೆ ಡಾಲಿ ಧನಂಜಯ್ ಕಾಲುಂಗರ ತೊಡಿಸಿದ್ದಾರೆ. ಎರಡೂ ಕುಟುಂಬದವರು ನೂತನ ವಧು-ವರರನ್ನು ಛೇಡಿಸುತ್ತಾ, ಪರಸ್ಪರ ಕಾಲೆಳೆಯುತ್ತಾ ಸಂಭ್ರಮದಿಂದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ನಟ ಡಾಲಿ ಧನಂಜಯ್ ಮತ್ತು ಧನ್ಯತಾ ವಿವಾಹ ಕಾರ್ಯ ಇಂದು ಆರಂಭವಾಗಿದೆ. ಇಂದು ಬಳೆ ಶಾಸ್ತ್ರ, ವಧು ವರ ನಿರೀಕ್ಷಣೆ ಇನ್ನೂ ಹಲವು ಶಾಸ್ತ್ರಗಳು ಇಂದು ನಡೆದಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!