ಸಾಮಾಗ್ರಿಗಳು
ಬೆಂಡೇಕಾಯಿ
ಕ್ಯಾಪ್ಸಿಕಂ
ಈರುಳ್ಳಿ
ಟೊಮ್ಯಾಟೊ
ಖಾರದಪುಡಿ
ಸಾಂಬಾರ್ ಪುಡಿ
ಗರಂ ಮಸಾಲಾ
ಅರಿಶಿಣ
ಚಟ್ನಿಪುಡಿ( ಶೇಂಗಾ+ಬೆಳ್ಳುಳ್ಳಿ+ಖಾರದಪುಡಿ+ಉಪ್ಪು+ಬೆಲ್ಲ)
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆಸಾಸಿವೆ ಜೀರಿಗೆ ಹಾಕಿ
ನಂತರ ಈರುಳ್ಳಿ ಹಾಕಿ ಬಾಡಿಸಿ
ನಂತರ ಕ್ಯಾಪ್ಸಿಕಂ ಆಲೂಗಡ್ಡೆ( ಬೇಕಿದ್ದರೆ) ಹಾಕಿ
ನಂತರ ಉಪ್ಪು ಹಾಕಿ ಮುಚ್ಚಿ, ಇದು ಬಾಡಿದ ನಂತರ ಇದಕ್ಕೆ ಬೆಂಡೇಕಾಯಿ ಹಾಕಿ ಹುರಿಯಿರಿ
ಬೆಂಡೆಕಾಯಿ ಲೋಳೆ ಬಿಟ್ಟ ನಂತರ ಖಾರದಪುಡಿ, ಗರಂಮಸಾಲಾ, ಸಾಂಬಾರ್ ಪುಡಿ ಹಾಕಿ
ನಂತರ ಚಟ್ನಿಪುಡಿ ಹಾಕಿ ಸ್ವಲ್ಪ ಸಮಯ ಬಿಟ್ಟು ಆಫ್ ಮಾಡಿ ಕೊತ್ತಂಬರಿ ಹಾಕಿದ್ರೆ ಡ್ರೈ ರೆಡಿ