September 27, 2026
Sunday, September 27, 2026
spot_img

ನಾಗರಪಂಚಮಿಯಂದು ಮಲೆನಾಡು ಮಂದಿ ಮಾಡುವ ಅರಿಶಿನ ಎಲೆಯ ಕಡುಬು ರೆಸಿಪಿ ಇಲ್ಲಿದೆ ನೋಡಿ

ನಾಗರಪಂಚಮಿಯ ಶುಭದಿನದಂದು ಮಲೆನಾಡಿನ ಜನರು ವಿಶೇಷವಾದ ಅರಿಶಿಣದ ಎಲೆಯ ಕಡುಬುಗಳನ್ನು ತಯಾರಿಸುತ್ತಾರೆ. ಇದು ತುಂಬಾ ಸಿಂಪಲ್‌ ಆದ ರೆಸಿಪಿ ಆಗಿದ್ದು, ಅರಿಶಿಣದ ಎಲೆ ಬೇಕೇ ಬೇಕು. ಬೇರೆ ಬೇರೆ ಊರುಗಳಲ್ಲಿ ಎಲೆ ಸಿಗದೇ ಇದ್ದರೆ ಇಡ್ಲಿ ರೂಪದಲ್ಲಿ ಅಥವಾ ಬೇರೆ ಎಲೆಯನ್ನು ಬಳಸಿ ಕಡುಬು ಮಾಡಬಹುದು.

ಸಾಮಾಗ್ರಿಗಳು: ಅಕ್ಕಿ, ಬೆಲ್ಲ, ಕಾಯಿತುರಿ, ಏಲಕ್ಕಿ ಪುಡಿ, ಅರಿಶಿಣದ ಎಲೆ

ಮಾಡುವ ವಿಧಾನ

ಮೊದಲು ಅಕ್ಕಿಯನ್ನು ಐದರಿಂದ ಆರು ಗಂಟೆಗಳ ಕಾಲ ನೀರಿನಲ್ಲಿ ನೆನೆಹಾಕಬೇಕು. ಆನಂತರ ಅದಕ್ಕೆ ಉಪ್ಪು ಹಾಕಿ ರುಬ್ಬಿ ಇಟ್ಟುಕೊಳ್ಳಿ

ನಂತರ ಪ್ಯಾನ್‌ಗೆ ತುಪ್ಪ ಹಾಕಿ ಕಾಯಿ ಹಾಕಿ ಬಾಡಿಸಿ, ಜೊತೆಗೆ ಬೆಲ್ಲದ ಪಾಕ ಹಾಗೂ ಏಲಕ್ಕಿ ಪುಡಿ ಹಾಕಿ ಮಿಕ್ಸ್‌ ಮಾಡಿ

ನಂತರ ಇದನ್ನು ಪಕ್ಕಕ್ಕೆ ತೆಗೆದು ಇಡಿ. ಆನಂತರ ಅರಿಶಿಣದ ಎಲೆಯನ್ನು ಹರಡಿ, ಅದರ ಮೇಲೆ ಅಕ್ಕಿಯ ಹಿಟ್ಟನ್ನು ಹಾಕಿ, ಮಧ್ಯಕ್ಕೆ ಕಾಯಿತುರಿ ಮಿಶ್ರಣ ಹಾಕಿ

ನಂತರ ಎಲೆಯನ್ನು ಮಡಚಿ ಸ್ಟೀಮ್‌ ಮಾಡಿದ್ರೆ ಕಡುಬು ರೆಡಿ

Must Read