ಹೇಗೆ ಮಾಡೋದು?
ಇದಕ್ಕೆ ಮೈಕ್ರೋಅವನ್ ಬೇಕಿಲ್ಲ. ಮನೆಯಲ್ಲಿ ಉಳಿದ ಚಪಾತಿಯಿಂದಲೇ ರುಚಿಯಾದ ಪಿಝಾ ತಯಾರು ಮಾಡಬಹುದು. ಹೇಗೆ ನೋಡಿ..
ಮೊದಲು ಚಪಾತಿ ಉಜ್ಜಿ, ಬೇಯಿಸಿಕೊಳ್ಳಿ, ನಂತರ ಅದರ ಮೇಲೆ ಪಿಝಾ ಸಾಸ್ ಹಾಕಿ.
ನಂತರ ಮಯೋನೀಸ್ ಹಾಕಿ, ನಂತರ ನಿಮ್ಮಿಷ್ಟದ ತರಕಾರಿಗಳನ್ನು ಹಾಕಿ. ಮೇಲೆ ಆರಿಗ್ಯಾನೊ ಹಾಗೂ ಚಿಲ್ಲಿ ಫ್ಲೇಕ್ಸ್ ಹಾಕಿ.
ತವಾಗೆ ಬೆಣ್ಣೆ ಹಾಕಿ ಈ ಚಪಾತಿ ಇಡಿ, ಮೇಲೆ ಚೀಸ್ ತುರಿ ಹಾಕಿ ಮುಚ್ಚಿ ಐದು ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ ಪಿಝಾ ಎಂಜಾಯ್ ಮಾಡಿ.