ಮಳೆಗಾಲದಲ್ಲಿ ಮೇಕಪ್ ಹೇಗಿರಬೇಕು? ಅಂದ ಹೆಚ್ಚಿಸಲಿದೆ ಈ ಸೂತ್ರಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಾಲಕ್ಕೆ ತಕ್ಕಂತೆ ನಮ್ಮ ಉಡುಗೆ-ತೊಡುಗೆ, ಜೀವನಶೈಲಿ ಬದಲಾಗುತ್ತಾ ಹೋಗುತ್ತದೆ. ಅದೇ ರೀತಿ ನಮ್ಮ ಮೇಕಪ್ ಕೂಡ ಬದಲಾಗುವುದು ಅನಿವಾರ್ಯ. ಎಲ್ಲಾ ಸಮಯದಲ್ಲೂ ಒಂದೇ ರೀತಿಯ ಮೇಕಪ್‌ ಸಲ್ಲದು. ಕಾಲಕ್ಕೆ ತಕ್ಕಂತೆ ಮೇಕಪ್‌ ಮಾಡಿಕೊಳ್ಳಬೇಕು. ಆಗ ಮಾತ್ರ ಮಹಿಳೆಯರು ಇನ್ನಷ್ಟು ಸುಂದರವಾಗಿ ಕಾಣಲು ಸಾಧ್ಯ.

ಇನ್ನು ಮಳೆಗಾಲದಲ್ಲಿ ಮೇಕಪ್‌ ಬಹು ಬೇಗನೆ ಹಾಳಾಗುತ್ತದೆ. ಅದಕ್ಕೆ ಕಾರಣ ಹೆಚ್ಚಿನ ತೇವಾಂಶ, ಈ ಸಮಯದಲ್ಲಿ ಮೇಕಪ್‌ ಬಗ್ಗೆ ಎಷ್ಟೇ ಕಾಳಜಿ ವಹಿಸಿದರೂ ಕೂಡ ಬಹುಬೇಗ ಮೇಕಪ್‌ ಹಾಳಾಗುತ್ತಿದೆ, ಕಾಂತಿ ಕಳೆದುಕೊಳ್ಳುತ್ತಿದೆ ಎಂದು ಯೋಚಿಸುತ್ತಿರುವವರು ಮತ್ತು ಮಳೆಗಾಲದಲ್ಲಿ ಹೇಗಪ್ಪಾ ಮೇಕಪ್‌ ಮಾಡಿಕೊಳ್ಳುವುದು ಎಂದು ಚಿಂತಿಸುತ್ತಿರುವವರು ಈ ಉತ್ತಮ ಸಲಹೆಗಳನ್ನು ಅನುಸರಿಸಿ.

* ಮಳೆಗಾಲದಲ್ಲಿ ಹಗುರವಾದ ಮೇಕಪ್ ಒಳಿತು. ಅಂದರೆ ಮೇಕಪ್ ಲೇಯರ್ ಕಡಿಮೆ ಮಾಡಿಕೊಳ್ಳಿ. ಹೆವಿ ಮೇಕಪ್ ಮಳೆಗಾಲಕ್ಕೆ ಸೂಕ್ತವಲ್ಲ. ಹಾಗಾಗಿ ಹೆಚ್ಚಿನ ಲೇಯರ್‌ ಬಳಸಿ ಮೇಕಪ್ ಮಾಡುವುದು ನಿಮ್ಮ ತ್ವಚೆಯ ರಂಧ್ರಗಳನ್ನು ಮುಚ್ಚಿಹಾಕುತ್ತವೆ. ಇದರಿಂದ ನೀವು ಬೆವರಿದಾಗ ನಿಮ್ಮ ಮೇಕಪ್ ಕರಗಲು ಆರಂಭವಾಗುತ್ತದೆ. ಜೊತೆಗೆ ಲೈಟ್ ಮೇಕಪ್ ನಿಂದ ನಿಮ್ಮ ತ್ವಚೆಯ ರಂಧ್ರಗಳಿಗೆ ಉಸಿರಾಡಲು ಅವಕಾಶ ಸಿಗುತ್ತದೆ. ಅದರಿಂದ ನಿಮ್ಮ ಮುಖ ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ.

* ಮುಖ ಕಾಂತಿಗೆ ತೇವಾಂಶ ಅಗತ್ಯ ಹಾಗಾಗಿ ನಿಮ್ಮ ತ್ವಚೆಯನ್ನು ಹೆಚ್ಚು ಕಾಲ ತೇವಾಂಶಭರಿತವಾಗಿರಿಸುವ ಮಾಯಿಶ್ಚರೈಸರ್ ಬಳಸಿ. ಇದು ನಿಮ್ಮ ಫೌಂಡೇಶನ್ ಜೊತೆ ಚೆನ್ನಾಗಿ ಬೆರೆತುಕೊಳ್ಳುವುದು. ಜೊತೆಗೆ ಉತ್ತಮ ಮ್ಯಾಟ್ ಪ್ರೈಮರ್ ಬಳಸಿ. ಇದು ಮೇಕಪ್‌ಗೆ ಒಂದೊಳ್ಳೆ ಬೇಸ್ ನೀಡುತ್ತದೆ.

* ಮಳೆಗಾಲದಲ್ಲಿ ಕ್ರೀಮ್ ಆಧಾರಿತ ಉತ್ಪನ್ನಗಳು ಕಿರಿಕಿರಿ ಉಂಟು ಮಾಡಬಹುದು. ಆದ್ದರಿಂದ ಮಳೆಗಾಲದಲ್ಲಿ ಪೌಡರ್‌ ಉತ್ಪನ್ನಗಳನ್ನು ಬಳಸಿ.

* ಮಳೆಗಾಲದಲ್ಲಿ ಟ್ರಾನ್ಸಫರ್ ಪ್ರೂಪ್ ಮ್ಯಾಟ್ ಲಿಪ್ಸ್ಟಿಕ್‌ಗಳನ್ನು ಆರಿಸಿಕೊಳ್ಳಿ. ನಿಮ್ಮ ಲಿಪ್ಸ್ಟಿಕ್ ಸರಿಯಾಗಿ ಸೆಟ್ ಆಗಲು, ಹಚ್ಚುವ ಮೊದಲು ಲಿಪ್ ಬಾಮ್ ಅಥವಾ ಮಾಯಿಶ್ಚರೈಸರ್ ಬಳಸಿ.

* ಮುಖದಲ್ಲಿನ ಕಪ್ಪು ಕಲೆಗಳನ್ನು ಮರೆಮಾಚಲು ಕನ್ಸೀಲರ್‌ಗಳು ಅಗತ್ಯ. ಆದರೆ ಹೆಚ್ಚು ಕ್ರೀಮ್‌ ಇರುವ ಕನ್ಸೀಲರ್‌ಗಳು ಮಳೆಗಾಲಕ್ಕೆ ಉತ್ತಮವಲ್ಲ. ಇವು ನಿಮ್ಮ ಮೇಕಪ್‌ ಅನ್ನು ಇನ್ನಷ್ಟು ದಟ್ಟವಾಗಿ ಕಾಣುವಂತೆ ಮಾಡುತ್ತವೆ. ಮಲೆಗಾಲದಲ್ಲಿ ಮೇಕಪ್ ಆದಷ್ಟು ಸಿಂಪಲ್ ಆಗಿದ್ದರೆ ಚೆನ್ನ.

* ವಾಟರ್‌ರ್ಫ್ರೂಪ್ ಮಸ್ಕರಾ ಹಾಗೂ ಐಲೈನರ್ ನಿಮ್ಮ ಕಣ್ಣು ಹಾಗೂ ರೆಪ್ಪೆಗೂದಲುಗಳು ಸ್ಮಡ್ಜ್ ಆಗದೇ ಇರುವಂತೆ ಕಾಪಾಡಿ, ಸುಂದರವಾದ ನೋಟವನ್ನು ನೀಡುತ್ತವೆ. ವಾಟರ್‌ ಪ್ರೂಫ್ ಇಲ್ಲದೇ ಹೋದಲ್ಲಿ ಮಳೆ ನೀರಿಗೆ ಸಿಲುಕಿ ಎಲ್ಲವೂ ಹಾಳಾಗುತ್ತದೆ.

* ಕೊನೆಯದಾಗಿ ಸೆಟ್ಟಿಂಗ್ ಸ್ಪ್ರೇ ಬಳಸುವುದನ್ನು ಮರೆಯದಿರಿ. ಇದು ನಿಮ್ಮ ಮೇಕಪನ್ನು ಸೆಟ್ ಮಾಡಿ, ಒಂದು ಕಂಪ್ಲೀಟ್ ಲುಕ್ ನೀಡುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!