ಹೊಸದಿಗಂತ ಡಿಜಿಟಲ್ ಡೆಸ್ಕ್:
ದಿನನಿತ್ಯ ಜಿಮ್‌ಗೆ ಹೋಗುವವರು ಕೆಲವೊಮ್ಮೆ ಮಧ್ಯದಲ್ಲಿ ಬ್ರೇಕ್ ತೆಗೆದುಕೊಳ್ಳುತ್ತಾರೆ. ಹೀಗೆ ಮಾಡೋದ್ರಿಂದ ದೇಹಕ್ಕೆ ವ್ಯಾಯಾಮವಿಲ್ಲದೆ ಮತ್ತಷ್ಟು ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಅಂತಹ ಸಂದರ್ಭದಲ್ಲಿ ದೇಹದ ತೂಕ ಹೆಚ್ಚಾಗುವುದನ್ನು ತಡೆಯುವುದು ಹೇಗೆ ಎನ್ನುವುದಕ್ಕೆ ಇಲ್ಲಿ ಸಲಹೆಯನ್ನು ನೀಡಲಾಗಿದೆ ಓದಿ ತಿಳಿಯಿರಿ.
ಜಿಮ್ ವರ್ಕೌಟ್ ಮಾಡದಿದ್ದಾಗ ನೀವು ಆಹಾರಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಕಾರ್ಬ್ಸ್ ಕಡಿಮೆ ಇರುವ ಪ್ರೊಟೀನ್ ಅಧಿಕವಿರುವ ಆಹಾರ ಸೇವಿಸಿ, ಜೊತೆಗೆ ಆಹಾರವನ್ನು ಸ್ವಲ್ಪ-ಸ್ವಲ್ಪವೆಂಬಂತೆ ಡಿವೈಡ್ ಮಾಡಿ ಸೇವಿಸಿ. ಈ ರೀತಿಯ ಊಟದ ಅಭ್ಯಾಸ ಮೈ ತೂಕ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
ಜಿಮ್‌ಗೆ ಹೋಗದಿದ್ದರೂ ಸಹ ಮನೆಯಲ್ಲೇ ವ್ಯಾಯಾಮ ಮಾತ್ರ ಮಾಡದೆ ಇರಬೇಡಿ. ವ್ಯಾಯಾಮ ಮಾಡಲು ಸಾಧ್ಯವಾಗದಿದ್ದರೆ ವಾಕ್ ಆದರೂ ಮಾಡಿ.
ದಿನನಿತ್ಯ ಸಾಕಷ್ಟು ನೀರು ಕುಡಿಯಿರಿ, ಇದರಿಂದ ನೀವು ಆಹಾರ ತಿನ್ನುವ ಪ್ರಮಾಣಕ್ಕೆ ಕಡಿವಾಣ ಹಾಕಬಹುದು.
ನಿದ್ದೆ ಚೆನ್ನಾಗಿ ಮಾಡಿದರೆ ಮೈ ತೂಕ ನಿಯಂತ್ರಣದಲ್ಲಿಡಲು ಸಹಾಯವಾಗುತ್ತದೆ. ಆರೋಗ್ಯಕರ ಮೈ ತೂಕಕ್ಕೆ ದಿನಕ್ಕೆ 8 ಗಂಟೆ ನಿದ್ದೆ ತುಂಬಾನೇ ಅವಶ್ಯಕ.